Thursday, June 4, 2026
Homeಕರಾವಳಿಉಡುಪಿವಿಕಲಚೇತನ ಯುವತಿಯ ಬಾಳಿಗೆ ಬೆಳಕಾದ ಉಡುಪಿಯ ಯುವಕ

ವಿಕಲಚೇತನ ಯುವತಿಯ ಬಾಳಿಗೆ ಬೆಳಕಾದ ಉಡುಪಿಯ ಯುವಕ

- Advertisement -
- Advertisement -

ಉಡುಪಿ: ಕಾಲುಗಳೆರಡು ಬಲಹೀನವಾದ ಉಡುಪಿಯ ವಿಕಲಚೇತನ ಯುವತಿಯೊಬ್ಬಳ ಬಾಳಿಗೆ ಯುವಕನೊಬ್ಬ ಬೆಳಕಾಗಿದ್ದಾನೆ. 

ಹೌದು.. ಉಡುಪಿಯ ಸುನೀತಾ ಪೊಲೀಯೋ ಪೀಡಿತೆ. ತನ್ನ ಎರಡೂ ಕಾಲುಗಳ ಬಲ ಕಳೆದುಕೊಂಡಿದ್ದಳು. ಪಿಯುಸಿವರಗೆ ಓದಿಕೊಂಡು ತಂದೆ-ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುನೀತಾ, ತನ್ನ ಕಾಲಿನಂತೆ ಬದುಕು ಕೂಡಾ ದೌರ್ಭಾಗ್ಯಕ್ಕೆ ಈಡಾದರೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಳು. ಆದರೆ ಆಕೆಯ ಚಿಂತೆಯನ್ನು ಯುವಕನ ರೂಪದಲ್ಲಿ ಬಂದ ದೇವರು ದೂರ ಮಾಡಿದ್ದಾನೆ.

ಯೆಸ್.. ಸುನೀತಾಳನ್ನು ಮದುವೆಯಾಗುವ ಮೂಲಕ ಸಂದೀಪ್ ಎಂಬ ಯುವಕ ಮಾದರಿಯಾಗಿದ್ದಾರೆ. ದುಬೈ ನಲ್ಲಿ ಉದ್ಯೋಗ ಮಾಡುತ್ತಿರುವ ಸಂದೀಪ್, ತಾನೇ ಮುಂದೆ ಬಂದು ಈಕೆಯ ಬಾಳ ಸಂಗಾತಿಯಾಗಿ, ಆಕೆಯ ಜೀವನ ಪಯಣಕ್ಕೆ ಆಧಾರವಾಗಲು ನಿರ್ಧರಿಸಿದ್ದಾರೆ. ಮನೆಯವರ ಒಪ್ಪಿಗೆಯಂತೆ ಈ ಅಪರೂಪದ ಮದುವೆಗೆ ಉಡುಪಿಯ ಕಂಬಳ್ಳಿ ದೇವಸ್ಥಾನ ಸಾಕ್ಷಿಯಾಯಿತು.

ಮದುಮಗಳು ನಡೆಯಲು ಆಗದೆ ವಾಕಿಂಗ್ ಸ್ಟಿಕ್ ತರಹದ್ದನ್ನು ಹಿಡಿದೇ ಹಸೆಮಣೆಗೆ ನಡೆದು ಬಂದಳು. ವರ ಸಂದೀಪ್ ಅತ್ಯಂತ ಲವಲವಿಕೆಯಿಂದಲೇ ಈಕೆಯ ಕುತ್ತಿಗೆಗೆ ತಾಳಿ ಕಟ್ಟುವ ಮೂಲಕ ಪೊಲಿಯೋ ಪೀಡಿತೆಗೆ ಬಾಳು ಕೊಟ್ಟಿದ್ದಾರೆ. ಈ ಅಪರೂಪದ ಮದುವೆಗೆ ಸೇರಿದ ಜನರು ವಧು-ವರರು ನೂರ್ಕಾಲ ಬಾಳಲಿ ಎಂದು ಆಶೀರ್ವದಿಸಿದರು.

- Advertisement -

Latest News

error: Content is protected !!