Thursday, June 4, 2026
Homeಕರಾವಳಿಬೆಳ್ತಂಗಡಿ: ಯುವಕನನ್ನು ಅಪಹರಣ ಮಾಡಿ‌ ಹಲ್ಲೆ ಮಾಡಿದ ಪ್ರಕರಣ: ಐವರು‌ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

ಬೆಳ್ತಂಗಡಿ: ಯುವಕನನ್ನು ಅಪಹರಣ ಮಾಡಿ‌ ಹಲ್ಲೆ ಮಾಡಿದ ಪ್ರಕರಣ: ಐವರು‌ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಮನೆಯಿಂದ ಪೇಟೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ಕಾರಿನಲ್ಲಿ ಬಂದ ತಂಡ ಕಿಡ್ನಾಪ್‌ ಮಾಡಿಕೊಂಡು ಅಳದಂಗಡಿ ಕೆದ್ದು ಶಾಲೆಗೆ ಕರೆದೊಯ್ಯುದ್ದು ಹಲ್ಲೆ ಮಾಡಿದ್ದಾರೆ.

ಬೆಳ್ತಂಗಡಿ ತಾಲೂ‌ಕಿನ ಲಾಯಿಲ ಗ್ರಾಮದ ಅಂಕಾಜೆ ನಿವಾಸಿ ಮ್ಯಾಕಾನಿಕ್ ಕೆಲಸ ಮಾಡುವ ನಿಶೇತ್(23) ಎಂಬತನನ್ನು ಬೊಲೆರೋ ವಾಹನಲ್ಲಿ ಬಂದ ಸುಮಾರು 8 ಮಂದಿ ದುಷ್ಕರ್ಮಿಗಳು ಬಲತ್ಕಾರದಿಂದ ಎಳೆದೊಯ್ದು ಸವಣಾಲು ರಸ್ತೆ ಮೂಲಕ ಅಳದಂಗಡಿಯ ಕೆದ್ದು ಶಾಲೆಯ ಆಟದ ಮೈದಾನಕ್ಕೆ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಬಳಿಕ  ಆತನಲ್ಲಿದ್ದ ಮೊಬೈಲ್ ಫೋನ್ ಮತ್ತು ಚಿನ್ನದ ಸರ ಕಸಿದ್ದಿದ್ದಾರೆ. ಘಟನೆ ನಂತರ ಮಾಹಿತಿ ತಿಳಿದ ನಿಶೇತ್ ನ ಕಡೆಯವರು ಸ್ಥಳಕ್ಕೆ ಹೋಗಿದ್ದಾರೆ. ಈ ವೇಳೆ  ಎರಡು ತಂಡದ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಇನ್ನೂ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಘಟನೆ ಬಗ್ಗೆ ವೇಣೂರು ಠಾಣೆಯ ಪಿಎಸ್ಐ ಸೌಮ್ಯ ಅವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದು ಕಿಡ್ನಾಪ್‌ ಮಾಡಿ ಹಲ್ಲೆ ಮಾಡಿದ ಐದು ಜನ ಆರೋಪಿಗಳನ್ನು ಊರವರ ಸಹಾಯದಿಂದ ವಶಕ್ಕೆ ಪಡೆದಿದ್ದಾರೆ. ಬಳಿಕ ವೇಣೂರು ಪೊಲೀಸರು ಐದು ಜನ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಬೆಳ್ತಂಗಡಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಿಶೇತ್ ಗೆ ಮುಖ ಹಾಗೂ ಇನ್ನಿತರ ಭಾಗಕ್ಕೆ  ಗಾಯವಾಗಿದ್ದು , ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!