Wednesday, October 5, 2022
Homeಉತ್ತರ ಕನ್ನಡಬೆಳ್ಳಿಯಲ್ಲಿ ಪಾರ್ಲಿಮೆಂಟ್ ಭವನದ ಕಲಾಕೃತಿ ರಚಿಸಿ ದಾಖಲೆ ಬರೆದ ಕಾರವಾರದ ಹೈದ

ಬೆಳ್ಳಿಯಲ್ಲಿ ಪಾರ್ಲಿಮೆಂಟ್ ಭವನದ ಕಲಾಕೃತಿ ರಚಿಸಿ ದಾಖಲೆ ಬರೆದ ಕಾರವಾರದ ಹೈದ

- Advertisement -
- Advertisement -

ಉತ್ತರಕನ್ನಡ: ಅತಿ ಕಡಿಮೆ ಚಿನ್ನ ಬಳಸಿ ಪೆಂಡೆಂಟ್‌ ಹಾಗೂ  ಲಾಕೆಟ್‌ ನಿರ್ಮಿಸಿ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ ಸೇರಿದ್ದ ಕಾರವಾರ ಕಡವಾಡ ನಿವಾಸಿ ಮಿಲಿಂದ್‌ ಅಣ್ವೇಕರ್ ಇದೀಗ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. 35 ಗ್ರಾಂ ಬೆಳ್ಳಿ ಬಳಸಿ ಪಾರ್ಲಿಮೆಂಟ್‌ ಭವನದ ಕಲಾಕೃತಿ ರೂಪಿಸಿ ದಾಖಲೆ ಬರೆದಿದ್ದಾರೆ.

75ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆ ಕಲಾಕೃತಿ ನಿರ್ಮಿಸಿದ್ದಾರೆ. 2 ಇಂಚು ಅಗಲ, 1.5 ಇಂಚು ಎತ್ತರ ಇರುವ ಈ ಪಾರ್ಲಿಮೆಂಟ್‌ ಭವನದ ಮೇಲೆ ರಾಷ್ಟ್ರಧ್ವಜ ಹಾರಾಡುವ ಕಲಾಕೃತಿ ರೂಪಿಸಿದ್ದಾರೆ.

ಹಿಂದೆ ಅವರು 0.960 ಗ್ರಾಂ ಚಿನ್ನದಲ್ಲಿ ತೆಂಡೂಲ್ಕರ್‌ ಚೈನ್‌ ತಯಾರಿಸಿ ಲಿಮ್ಕಾ ದಾಖಲೆ ಮಾಡಿದ್ದರು. ತಿರುಗುವ ಪೆಂಡೆಂಟ್‌, 1.3 ಸೆಂ.ಮೀ.ನ ಚಿನ್ನದ ಫ್ಯಾನ್‌, ಎಂಟು ಗ್ರಾಂ ಚಿನ್ನದಲ್ಲಿ ಉಂಗು ರದ ಮೇಲೆ ತಾಜ್‌ ಮಹಲ್‌, ಕಟ್ಟಿಗೆಯ ಆಕೃತಿಯಲ್ಲಿ ಬಂಗಾರದ ಪೆಂಡೆಂಟ್‌, ಕೇವಲ 12 ಗ್ರಾಂ ಚಿನ್ನದಲ್ಲಿ ಹಂಪಿಯ ಕಲ್ಲಿನ ರಥ, 54 ಗ್ರಾಂ ತೂಕದಲ್ಲಿ ಬೆಳ್ಳಿ, ಬಂಗಾರ, ತಾಮ್ರ ಮಿಶ್ರಿತ ಕೇದಾರನಾಥ ದೇವಾಲಯದ ಪುಟ್ಟ ಕೃತಿ, 36 ಗ್ರಾಂ ಬೆಳ್ಳಿ ಬಳಸಿ ವಿಜಯ ರಥ, ರಥವನ್ನು ಹೋಲುವ ಆಕಾಶ ಬುಟ್ಟಿಯನ್ನೂ ರಚಿಸಿದ್ದರು.

- Advertisement -
spot_img
spot_img
- Advertisment -

Latest News

error: Content is protected !!