Thursday, June 4, 2026
Homeಕರಾವಳಿಉಡುಪಿಮಂಗಳೂರು : ತಲೆಮರೆಸಿಕೊಂಡಿದ್ದ ಹಲವು ಪ್ರಕರಣಗಳ ಆರೋಪಿಯ ಸೆರೆ

ಮಂಗಳೂರು : ತಲೆಮರೆಸಿಕೊಂಡಿದ್ದ ಹಲವು ಪ್ರಕರಣಗಳ ಆರೋಪಿಯ ಸೆರೆ

- Advertisement -
- Advertisement -

ಮಂಗಳೂರು : ಹಲವು ಪ್ರಕರಣಗಳಿಗೆ ಪೊಲೀಸರಿಗೆ ಬೇಕಾಗಿದ್ದ, ತಲೆಮರೆಸಿಕೊಂಡಿದ್ದ ಆರೋಪಿ ಮೂಡಬಿದಿರೆ ತಾಲೂಕಿನ ತೋಡಾರು ಗ್ರಾಮದ ಫೈಝಲ್ ಯಾನೆ ಕ್ಯಾಬರೆ ಫೈಝಲ್ (33) ಎಂಬಾತನನ್ನು ಮೂಡಬಿದಿರೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಆರೋಪಿಯ ವಿರುದ್ಧ ಮೂಡಬಿದಿರೆ, ವೇಣೂರು, ಬಜ್ಪೆ, ಮಂಗಳೂರು ಗ್ರಾಮಾಂತರ, ಅಜೆಕಾರು, ಲಿಂಗದಹಳ್ಳಿ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.

ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನಕ್ಕಾಗಿ ನ್ಯಾಯಾಲಯವು ವಾರೆಂಟ್ ಹೊರಡಿಸಿತ್ತು. ಅದರಂತೆ ಶುಕ್ರವಾರ ಈತ ಮನೆಯಲ್ಲಿರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಲಾಗಿತ್ತು. ಈ ವೇಳೆ ಆರೋಪಿ ಮನೆಯಿಂದ ಓಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಬೆನ್ನಟ್ಟಿದಾಗ ಆರೋಪಿಯು ಚೂರಿ ಮತ್ತು ಕಲ್ಲಿನಿಂದ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆದಾಗ್ಯೂ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!