Thursday, June 4, 2026
Homeಚಿಕ್ಕಮಗಳೂರುಶೋಭಾ ಕರಂದ್ಲಾಜೆ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದ ಜನರು: ಫೋಸ್ ಕೊಟ್ಟು ಸುಸ್ತಾದ ಕೇಂದ್ರ ಸಚಿವೆ

ಶೋಭಾ ಕರಂದ್ಲಾಜೆ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದ ಜನರು: ಫೋಸ್ ಕೊಟ್ಟು ಸುಸ್ತಾದ ಕೇಂದ್ರ ಸಚಿವೆ

- Advertisement -
- Advertisement -

ಚಿಕ್ಕಮಗಳೂರು: ಕೇಂದ್ರ ಸಚಿವೆ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಜನರು ಮುಗಿಬಿದ್ದ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

ಮಳೆಯಿಂದಾಗಿ ಹಾನಿಗೊಳಗಾಗಿರುವ ಪ್ರದೇಶಗಳ ವೀಕ್ಷಣೆಗೆ ಸಚಿವೆ ಶೋಭಾ ಕರಂದ್ಲಾಜೆ ಬಂದಿದ್ದ ವೇಳೆ ಜನರು ಫೋಟೋ ಮತ್ತು ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗಿದ್ದಾರೆ‌.

ಮೇಡಂ ಪ್ಲೀಸ್ ಒಂದು ಫೋಟೋ, ನಂಗೊಂದು ನಿಮ್ಮ ಜೊತೆ ಸೆಲ್ಫಿ ಬೇಕೇ ಬೇಕು ಮೇಡಂ ಅಂತಾ ವಿನಂತಿ ಮಾಡಿಕೊಂಡು ಪೋಟೋ, ಸೆಲ್ಫಿ ತೆಗೆದುಕೊಂಡಿದ್ದಾರೆ‌. ಮೂಡಿಗೆರೆ ತಾಲೂಕಿನ ತಲಗೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಫೋಟೋಗೆ ಫೋಸ್ ಕೊಟ್ಟು ಕೊನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುಸ್ತಾಗಬೇಕಾಯ್ತು.

- Advertisement -

Latest News

error: Content is protected !!