Thursday, June 4, 2026
Homeಕರಾವಳಿಬಂಟ್ವಾಳ: ಗದ್ದೆಯಲ್ಲಿ‌ ಕಾಲು ಜಾರಿ ಬಿದ್ದು ಯುವಕ ಸಾವು

ಬಂಟ್ವಾಳ: ಗದ್ದೆಯಲ್ಲಿ‌ ಕಾಲು ಜಾರಿ ಬಿದ್ದು ಯುವಕ ಸಾವು

- Advertisement -
- Advertisement -

ಬಂಟ್ವಾಳ; ಗದ್ದೆಯಲ್ಲಿ ಕಾಲು ಜಾರಿ ಬಿದ್ದು ಯುವಕನೋರ್ವ  ಮೃತಪಟ್ಟ ಘಟನೆ ಪೊಳಲಿ ಸಮೀಪದ ಪುಂಚಮೆ ಎಂಬಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರು ಪದವು ನಿವಾಸಿ ದಾಮೋದರ(32) ಮೃತ ದುರ್ದೈವಿ.

ಮೇಸ್ತ್ರಿ ಕೆಲಸ ಮಾಡುತ್ತಿದ್ಧ ದಾಮೋದರ್ ಬೆಳಿಗ್ಗೆ ಪುಂಚಮೆ ಎಂಬಲ್ಲಿಗೆ ಗದ್ದೆಯಲ್ಲಿ ನರ್ತೆ ಹೆಕ್ಕಲು ಹೋಗಿದ್ದ ವೇಳೆ ಆಯತಪ್ಪಿ ಮುಗ್ಗರಿಸಿ ಗದ್ದೆಗೆ ಬಿದ್ದಿದ್ದು, ತಲೆ ಗದ್ದೆಯಲ್ಲಿ ಹೂತು ಹೋಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬಂಟ್ವಾಳ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!