Thursday, June 4, 2026
Homeಕರಾವಳಿಸುಳ್ಯ; ತೆಂಗಿನಮರದಿಂದ ಬಿದ್ದು ಯುವಕ ಸಾವು

ಸುಳ್ಯ; ತೆಂಗಿನಮರದಿಂದ ಬಿದ್ದು ಯುವಕ ಸಾವು

- Advertisement -
- Advertisement -

ಸುಳ್ಯ; ತೆಂಗಿನಮರದಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ನೆಲ್ಲೂರು ಕೆಮ್ರಾಜೆಯ ಬೊಳ್ಳಾಜೆ ಬಳಿಯ ಕಂದೂರಿನಲ್ಲಿ ನಡೆದಿದೆ. ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆಯ ಹರೀಶ (29) ಮೃತ ದುರ್ದೈವಿ.

ಹರೀಶ್ ಇಂದು ಬೆಳಿಗ್ಗೆ ನೆಲ್ಲೂರು ಕೆಮ್ರಾಜೆಯ ಬೊಳ್ಳಾಜೆ ಬಳಿಯ ಕಂದೂರು ಸಚಿನ್ ಕೆ ಎಸ್ ಎಂಬವರ ಜಾಗದಲ್ಲಿ ತೆಂಗಿನ ತೆಗೆಯಲು ಈ ಜಾಗವನ್ನು ನೋಡಿಕೊಳ್ಳುತ್ತಿದ್ದ ಮನಮೋಹನ ಕೆ ಎಂಬವರು ಇಬ್ಬರನ್ನು ಕರೆಸಿಕೊಂಡಿದ್ದರೆನ್ನಲಾಗಿದೆ. ಮಧ್ಯಾಹ್ನದ ಸುಮಾರಿಗೆ ಹರೀಶರವರು ತೆಂಗಿನ ಮರದಿಂದ ಕಾಯಿ ಕಿತ್ತು ಇಳಿಯುತ್ತಿದ್ದಾಗ ಸ್ಮೃತಿ ತಪ್ಪಿ ಕೆಳಗೆ ಬಿದ್ದರೆನ್ನಲಾಗಿದೆ. ಕೂಡಲೇ ಅಲ್ಲಿ ಇದ್ದವರು ಅಸ್ಪತ್ರೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟರೆನ್ನಲಾಗಿದೆ.ಮೃತರು ಪತ್ನಿ ಎರಡು ಮಕ್ಕಳು ತಾಯಿ ಮತ್ತು ಸಹೋದರ ಸತೀಶ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!