ಗದಗ : ಮದುವೆಯಾಗಲು ಹುಡುಗಿ ನೋಡಲು ಹೋಗಿದ್ದ ಜಿಲ್ಲೆಯ ಮುಂಡರಗಿ ತಾಲೂಕಿನ ಎಕ್ಲಾಸಪುರ ಗ್ರಾಮದ ಟಿಪ್ಪು ಸುಲ್ತಾನ್ ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮುಂಡರಗಿ ಎಕ್ಸಾಪೂರ ಬಳಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಉಪ್ಪಿನ ಬೆಟಗೇರಿಗೆ ನಿನ್ನೆ ಕನ್ಯೆ ನೋಡಿ ಬರುವುದಾಗಿ ಹೋಗಿದ್ದ. ರಾತ್ರಿ ಮಳೆ ಜೋರಾಗಿ ಬರುತ್ತಿದ್ದ ಕಾರಣ ರಾತ್ರಿ ಮುಂಡರಗಿಯಲ್ಲಿ ಇದ್ದು, ಬೆಳಗ್ಗೆ ಊರಿಗೆ ಬರುವಂತೆ ಕುಟುಂಬಸ್ಥರು ಹೇಳಿದ್ದಾರೆ. ಆಗ ಓಕೆ ಅಂದವನ್ನು, ಬಳಿಕ ಕುಟುಂಬಸ್ಥವರ ಮಾತು ಕೇಳದೆ ರಾತ್ರಿ ಹಳ್ಳದಾಟಲು ಮುಂದಾಗಿದ್ದಾನೆ.
ನೀರಿನ ರಭಸಕ್ಕೆ ಬೈಕ್ ಸಮೇತ ಟಿಪ್ಪು ಸುಲ್ತಾನ್ ಕೊಚ್ಚಿ ಹೋಗಿದ್ದ. ರಾತ್ರಿ ಪೋನ್ ಸ್ವಿಚ್ಛ್ ಆಫ್ ಆಗಿತ್ತು. ಆದರೆ ಬೆಳಗ್ಗೆ ಮುಳ್ಳಿನ ಪೊದೆಯಲ್ಲಿ ಟಿಪ್ಪು ಸುಲ್ತಾನ್ ಶವ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಮುಂಡರಗಿ ಪೊಲೀಸರು ಹಾಗೂ ತಹಶಿಲ್ದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
