- Advertisement -
- Advertisement -
ಬೆಂಗಳೂರು : ಮೆಜೆಸ್ಟಿಕ್‍ನಿಂದ ಪೀನ್ಯ ಕಡೆಗೆ ಹೊರಟಿದ್ದ ಕೆಎ-01-ಎಫ್-4659 ನಂಬರ್ ಬಸ್ಸೊಂದರ ಆಕ್ಸೆಲ್ ರಾಡ್ ತುಂಡಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚರಿಸಿದ ಘಟನೆ ನಗರದ ಓಕಳಿಪುರಂ ಅಂಡರ್ ಪಾಸ್ ಕೆಳಗೆ ನಡೆದಿದೆ.
ಬಸ್‍ನ ಆಕ್ಸೆಲ್ ರಾಡ್ ಪೀಣ್ಯ ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅಚಾನಕ್ ಆಗಿ ತುಂಡಾಗಿದ್ದು, ಈ ವೇಳೆಯಲ್ಲಿ ಬಸ್ ಡಿವೈಡರ್ ಮೇಲಕ್ಕೆ ಬಂದು ನಿಂತುಕೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿರುವುದಿಲ್ಲ. ಬಸ್ಸಿನ ಎಲ್ಲಾ ಸೀಟುಗಳು ಭರ್ತಿಯಾಗಿದ್ದು, ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಘಟನೆ ಕುರಿತು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಬಿಎಂಟಿಸಿ ಇಂಜಿನಿಯರ್ ಗಳು ಭೇಟಿ ಮಾಡಿ ಘಟನೆಯ ಕುರಿತು ಪರಿಶೀಲನೆ ನಡೆಸಿದ್ದಾರೆ.
- Advertisement -
