Friday, April 26, 2024
Homeಕರಾವಳಿಎಸ್ಸೆಸೆಲ್ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಬೆಸ್ಟ್ ಫೌಂಡೇಷನ್ ವತಿಯಿಂದ ಸನ್ಮಾನ

ಎಸ್ಸೆಸೆಲ್ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಬೆಸ್ಟ್ ಫೌಂಡೇಷನ್ ವತಿಯಿಂದ ಸನ್ಮಾನ

spot_img
- Advertisement -
- Advertisement -

ಬೆಳ್ತಂಗಡಿ: ಎಸ್. ಎಸ್. ಎಲ್. ಸಿ ಪರೀಕೆಯಲ್ಲಿ 625/625 ಅಂಕ ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ  ಇಲ್ಲಿನ ವಿದ್ಯಾರ್ಥಿಯಾಗಿರುವ, ಮಚ್ಚಿನ ಗ್ರಾಮದ ನೆತ್ತರ ಶಿವಪ್ಪ ಪೂಜಾರಿ , ಹರೀಣಾಕ್ಷಿ ಮಗನಾದ ರೋಶನ್ ಹಾಗೂ ಸೈಂಟ್ ಮೇರೀಸ್ ಶಾಲೆ ಲಾಯಿಲ ಇಲ್ಲಿನ ವಿದ್ಯಾರ್ಥಿನಿ ರಾಮಣ್ಣಗೌಡ , ಗೀತಾ ಇವರ ಮಗಳು ಕುಮಾರಿ ಮಧುಶ್ರೀ ಇವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ  ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾಗಿರುವ ,  ರಕ್ಷಿತ್ ಶಿವರಾಂ ಅವರು ಭೇಟಿ ನೀಡಿ, ವಿದ್ಯಾರ್ಥಿಗಳನ್ನು ಮನೆಯವರ ಉಪಸ್ಥಿತಿಯಲ್ಲಿ ಸನ್ಮಾನಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಿತ್ ಶಿವರಾಂ ಅವರು , ವಿದ್ಯಾರ್ಥಿಗಳ ಸಾಧನೆಯಿಂದ ತಾಲೂಕಿನ ಘನತೆ , ಗೌರವ ಹೆಚ್ಚಿದೆ. ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಸಹಾಯ , ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಗೌಡ , ಶ್ರೀಧರ್ ಮಡಿವಾಳ ಮಚ್ಚಿನ  ಮತ್ತಿತರರ ಪ್ರಮುಖರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!