Wednesday, June 24, 2026
Homeಕರಾವಳಿಕಡಬ:ರಾಜಾರೋಷವಾಗಿ ಬಂದು ಹೆಲ್ಮೆಟ್ ಎಗರಿಸಿದ ಸ್ಕೂಟರ್ ಸವಾರ

ಕಡಬ:ರಾಜಾರೋಷವಾಗಿ ಬಂದು ಹೆಲ್ಮೆಟ್ ಎಗರಿಸಿದ ಸ್ಕೂಟರ್ ಸವಾರ

- Advertisement -
- Advertisement -

ಕಡಬ: ಹಾಡಹಗಲೇ ಸಾಕಷ್ಟು ಜನ ಓಡಾಡುತ್ತಿರುವಾಗಲೇ ಸ್ಕೂಟರ್ ಸವಾರನೊಬ್ಬ ಬೈಕ್ ಮೇಲೆ ಇಟ್ಟಿದ್ದ ಹೆಲ್ಮೆಟ್ ನ್ನು ಎಗರಿಸಿರುವ ಘಟನೆ ಕಡಬದಲ್ಲಿ ನಡೆದಿದೆ.

ಕಡಬ ಸೂಪರ್ ಮಾರ್ಕೆಟ್ ಬಳಿ ದ್ವಿಚಕ್ರ ವಾಹನ ಸವಾರ ತನ್ನ ಗಾಡಿ ಪಾರ್ಕ್ ಮಾಡಿ ತೆರಳಿದ್ದರು. ಸ್ವಲ್ಪ ಹೊತ್ತಿನ ಬಳಿಕ ದ್ವಿಚಕ್ರ ವಾಹನದ ಬಳಿ ಬಂದ ಲುಂಗಿಧಾರಿಯೊಬ್ಬ ಹೆಲ್ಮೆಟ್ ಎಗರಿಸುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಬಳಿಕ ಪಕ್ಕದ ಫ್ಯಾನ್ಸಿ ಸ್ಟೋರ್ ಬಳಿ ತಾನು ನಿಲ್ಲಿಸಿದ್ದ ಸ್ಕೂಟರ್ ನಲ್ಲಿ ಅದೇ  ಹೆಲ್ಮೆಟ್ ಧರಿಸಿ ಸಂಚರಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.

- Advertisement -

Latest News

error: Content is protected !!