Thursday, May 2, 2024
Homeತಾಜಾ ಸುದ್ದಿವಾಹನ ಸವಾರರಿಗೆ ಭರ್ಜರಿ ಶಾಕ್: ಯಾವ್ಯಾವುದೋ ಹೆಲ್ಮೆಟ್ ಧರಿಸಿದ್ರೆ ಬೀಳುತ್ತೆ 2000 ರೂ. ದಂಡ

ವಾಹನ ಸವಾರರಿಗೆ ಭರ್ಜರಿ ಶಾಕ್: ಯಾವ್ಯಾವುದೋ ಹೆಲ್ಮೆಟ್ ಧರಿಸಿದ್ರೆ ಬೀಳುತ್ತೆ 2000 ರೂ. ದಂಡ

spot_img
- Advertisement -
- Advertisement -

ನವದೆಹಲಿ; ಅಯ್ಯೋ! ಯಾವುದಾದ್ರೇನು ಗುರು? ಕಾಟಾಚಾರಕ್ಕೆ ತಲೆ ಮೇಲೆ ಹೆಲ್ಮೆಟ್ ಒಂದು ಇದ್ರೆ ಸಾಕು ಗುರು ಅಂತಾ ಬೇಕಾಬಿಟ್ಟಿ ಹೆಲ್ಮೆಟ್ ಹಾಕ್ಕೊಂಡು ಓಡಾಡೋ ಮಂದಿಗೆ ಇದೀಗ ಭರ್ಜರಿ ಶಾಕ್ ಎದುರಾಗಿದೆ.

 ಐಎಸ್‌ಐ ಮಾನ್ಯತೆ ಇರದ ಹೆಲ್ಮೆಟ್‌ ಧರಿಸಿದರೆ ದುಬಾರಿ ದಂಡ ವಿಧಿಸುವ ನಿಯಮ ಜಾರಿಗೆ ಬಂದಿದೆ.1998 ರ ಮೋಟಾರು ವಾಹನ ಕಾಯ್ದೆಯನ್ನು ನವೀಕರಿಸಿದ್ದು, ಹೆಲ್ಮೆಟ್ ಅನ್ನು ಸರಿಯಾಗಿ ಧರಿಸುವ ನಿಯಮವನ್ನು ಉಲ್ಲಂಘಿಸಿದ ದ್ವಿಚಕ್ರ ವಾಹನ ಸವಾರರಿಗೆ 2,000 ರೂ. ದಂಡ ಬೀಳಲಿದೆ.

ಹೊಸ ನಿಯಮಗಳ ಅನ್ವಯ ವಾಹನ ಸವಾರರು, ಹೆಲ್ಮೆಟ್‌ ಧರಿಸುವುದು ಮಾತ್ರವಲ್ಲದೇ, ಅದರಲ್ಲಿ ಇರುವ ಬೆಲ್ಟ್‌ ಅನ್ನೂ ಕಡ್ಡಾಯವಾಗಿ ಹಾಕಿಕೊಂಡಿರಬೇಕು. ಇಲ್ಲದೇ ಹೋದಲ್ಲಿ 1000ರೂ. ದಂಡ ವಿಧಿಸಬಹುದು. ಇನ್ನು ಐಎಸ್‌ಐ ಚಿಹ್ನೆ ಇರದ ಹೆಲ್ಮೆಟ್‌ ಹಾಕಿದ್ದರೆ ಅದಕ್ಕೆ 1000 ರೂ. ದಂಡ ವಿಧಿಸಲಾಗುವುದು. ಜೊತೆಗೆ ಹೆಲ್ಮೆಟ್‌ ಹಾಕಿದ್ದರೂ ಸಿಗ್ನಲ್‌ ಜಂಪ್‌ ಮಾಡಿದರೆ 2000ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಜೊತೆಗೆ ಲೈಸನ್ಸ್‌ ಅನ್ನು ಕೂಡಾ 3 ತಿಂಗಳ ಅವಧಿಯವರೆಗೆ ಅನರ್ಹಗೊಳಿಸಬಹುದು ಎಂದು ಮೋಟಾರು ವಾಹನ ಕಾಯ್ದೆ ತಿಳಿಸಿದೆ.

ಜನರು ಹೆಲ್ಮೆಟ್‌ ಅನ್ನು ಸಡಿಲವಾಗಿ ಧರಿಸುವುದು. ಅದರ ಸ್ಟ್ರ್ಯಾಪ್‌ ಅನ್ನು ಹಾಕಿಕೊಳ್ಳದೇ ಇರುವುದರಿಂದ ಯಾವುದೇ ಸುರಕ್ಷತೆ ಸಿಗುವುದಿಲ್ಲ. ಬಿಎಸ್‌ಐ ಅಥವಾ ಐಎಸ್‌ಐ ಪ್ರಮಾಣೀಕೃತ ಉತ್ತಮ ಗುಣಮಟ್ಟದ ಹೆಲ್ಮೆಟ್‌ ಧರಿಸುವುದು‌ ಕಡ್ಡಾಯವಾಗಿದೆ.

- Advertisement -
spot_img

Latest News

error: Content is protected !!