Saturday, June 6, 2026
Homeಕರಾವಳಿಉಡುಪಿಮಂಗಳೂರಿನಿಂದ ಊರಿಗೆ ತೆರಳುತ್ತಿದ್ದಾಗ ಬಸ್ಸಿನಲ್ಲೇ ಯುವಕನಿಗೆ ಹೃದಯಾಘಾತ

ಮಂಗಳೂರಿನಿಂದ ಊರಿಗೆ ತೆರಳುತ್ತಿದ್ದಾಗ ಬಸ್ಸಿನಲ್ಲೇ ಯುವಕನಿಗೆ ಹೃದಯಾಘಾತ

- Advertisement -
- Advertisement -

ಉಡುಪಿ: ಮಂಗಳೂರಿನಿಂದ ತನ್ನ ಊರು ಗುಲ್ಬರ್ಗಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಯುವಕನೋರ್ವನಿಗೆ  ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಕಾಪುವಿನ ಉದ್ಯಾವರ ಸಮೀಪ ನಡೆದಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಕನಕಪ್ಪದಂಡಿನ(36) ಮೃತ ಯುವಕ.

ಕನಕಪ್ಪದಂಡಿನ ಮಂಗಳೂರಿಗೆ ಕೂಲಿ ಕೆಲಸಕ್ಕೆಂದು ಬಂದು ಪಂಪ್‌ವೆಲ್ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.ಮಳೆಯ ಕಾರಣಕ್ಕೆ ಊರಿನಲ್ಲಿ ಕೃಷಿ ಕೆಲಸ ಮಾಡಲು ಬಸ್ಸಿನಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಇವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!