Friday, June 5, 2026
Homeತಾಜಾ ಸುದ್ದಿಕಾರ್ಕಳದ ಅರ್ಬಿ ಫಾಲ್ಸ್ ನಲ್ಲಿ ಮುಳುಗಿ ಯುವಕ ಸಾವು

ಕಾರ್ಕಳದ ಅರ್ಬಿ ಫಾಲ್ಸ್ ನಲ್ಲಿ ಮುಳುಗಿ ಯುವಕ ಸಾವು

- Advertisement -
- Advertisement -

ಕಾರ್ಕಳ. ಇಲ್ಲಿನ ತೆಳ್ಳಾರು ಸಮೀಪದ ಮುಂಡ್ಲಿ ಅರ್ಬಿ ಫಾಲ್ಸ್ ನಲ್ಲಿ ನೀರಿನಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.ಇನ್ನು ಮೃತ ಯುವಕನನ್ನು ಕಾರ್ಕಳದ ಕಿರಣ್ (21) ಎಂದು ಗುರುತಿಸಲಾಗಿದೆ.

ನಿನ್ನೆ ಐದು ಮಂದಿ ಗೆಳೆಯರ ಗುಂಪು  ಅರ್ಬಿ ಫಾಲ್ಸಿಗೆ ಭೇಟಿ ನೀಡಿದೆ. ಈ ವೇಳೆ ಗೆಳೆಯರೆಲ್ಲ ನೀರಿನಲ್ಲಿ ಸ್ನಾನ ಮಾಡುತ್ತಿದ್ದರು. ಈ ಸಂದರ್ಭ ಕಿರಣ್  ತಾನು ಟಾಯ್ಲೆಟ್ ಹೋಗಿ ಬರುವುದಾಗಿ ಹೇಳಿ ನೀರಿನ ಇನ್ನೊಂದು ಬದಿಗೆ ಹೋಗಿದ್ದಾರೆ. ಸುಮಾರು ಹೊತ್ತಾದರೂ ಹಿಂದಿರುಗದೇ ಇದ್ದುದ್ದರಿಂದ ಗೆಳೆಯರು ಎಲ್ಲಾ ಕಡೆ ಹುಡುಕಾಡಿದರೂ ಎಲ್ಲೂ ಕಿರಣ್ ಪತ್ತೆಯಾಗಿಲ್ಲ.

ಬಳಿಕ ಹತ್ತಿರದ ಮನೆಯ ಸುನೀಲ್ ಶೆಟ್ಟಿ ಎಂಬವರಿಗೆ ತಿಳಿಸಿದ್ದಾರೆ. ಅವರ ಪರಿಚಯಸ್ಥರ ಜೊತೆ ಹುಡುಕಾಡಿ, ನಂತರ ಮುಳುಗು ತಜ್ಞರನ್ನು ಕರೆತಂದು ನೀರಿನಲ್ಲಿ ಹುಡುಕಾಟ ನಡೆಸಿದ್ದಾರೆ. ರಾತ್ರಿ ವೇಳೆಗೆ ಕಿರಣ್ ಅವರ ಮೃತದೇಹ  ಪತ್ತೆಯಾಗಿದೆ ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!