Tuesday, May 7, 2024
Homeತಾಜಾ ಸುದ್ದಿಟೀಂ ಮುಂಬೈನ ಮಾಜಿ ವೇಗಿ ಕೊರೊನಾಗೆ ಬಲಿ- ಸಚಿನ್​ ತೆಂಡೂಲ್ಕರ್​ ಆಪ್ತ ವಿಜಯ್​ ಶಿರ್ಕೆ ಇನ್ನಿಲ್ಲ!..

ಟೀಂ ಮುಂಬೈನ ಮಾಜಿ ವೇಗಿ ಕೊರೊನಾಗೆ ಬಲಿ- ಸಚಿನ್​ ತೆಂಡೂಲ್ಕರ್​ ಆಪ್ತ ವಿಜಯ್​ ಶಿರ್ಕೆ ಇನ್ನಿಲ್ಲ!..

spot_img
- Advertisement -
- Advertisement -

ಮುಂಬೈ: ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಆಪ್ತ ಗೆಳೆಯ ಮುಂಬೈನ ಮಾಜಿ ವೇಗಿ ವಿಜಯ್​ ಶಿರ್ಕೆ ಕೊರೊನಾದಿಂದಾಗಿ ನಿಧನರಾಗಿದ್ದಾರೆ. ಕೊರೋನಾ ಪಾಸಿಟಿವ್ ಆಗಿದ್ದು ಥಾನೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. 57 ವರ್ಷ ವಯಸ್ಸಿನ ವಿಜಯ್​ ಶಿರ್ಕೆ, ಸಚಿನ್​ ತೆಂಡೂಲ್ಕರ್​ ಹಾಗೂ ವಿನೋದ್ ಕಾಂಬ್ಳಿ ಜೊತೆ ಕ್ರಿಕೆಟ್​ ಆಡಿದ್ದರು.

ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ನಲ್ಲಿ 17 ವರ್ಷದೊಳಗಿನವರಿಗೆ ತರಬೇತಿದಾರನಾಗಿ ದುಡಿದಿದ್ದ ಶಿರ್ಕೆ ನಿಧನಕ್ಕೆ ಸಂತಾಪ ಸೂಚಿಸಿರುವ ಕಾಂಬ್ಲಿ, ಶಿರ್ಕೆಯ ನಿಧನ ವಾರ್ತೆ ಕೇಳಿ ತುಂಬಾನೇ ದುಃಖವಾಗಿದೆ. ವೈಯಕ್ತಿಕವಾಗಿ ಇದು ನನಗೆ ಬಹಳ ದೊಡ್ಡ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!