Monday, April 29, 2024
Homeತಾಜಾ ಸುದ್ದಿಭಾರತದ ಈ ನಗರದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತೆ ಕಾಂಡೋಮ್..!

ಭಾರತದ ಈ ನಗರದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತೆ ಕಾಂಡೋಮ್..!

spot_img
- Advertisement -
- Advertisement -

ಮುಂಬೈ: ವಿವಾಹಿತರು ಹೆಚ್ಚಿನ ಪ್ರಮಾಣದಲ್ಲಿ ಗರ್ಭ ನಿರೋಧಕಗಳನ್ನ ಬಳಕೆ ಮಾಡುತ್ತಿರೋದ್ರಿಂದ ದೇಶದ ಜನಸಂಖ್ಯೆ ಸ್ಥಿರವಾಗುತ್ತಿದೆ ಎಂದು ಹೊಸ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಬಹಿರಂಗಪಡಿಸಿದೆ.‌

ಈ ವರದಿಯನ್ನ ಸೂಕ್ಷ್ಮವಾಗಿ ಗಮನಿಸಿದಾಗ ದೇಶದಲ್ಲಿ ಕಳೆದ 5 ವರ್ಷಗಳಲ್ಲಿ ಮಹಿಳೆಯರು ಗರ್ಭ ನಿರೋಧಕ ಮಾತ್ರೆ ಬಳಕೆ ಮಾಡೋದನ್ನ ಕಡಿಮೆ ಮಾಡಿದ್ದಾರೆ ಹಾಗೂ ಕಾಂಡೋಮ್​​ಗಳ ಬಳಕೆ ಹೆಚ್ಚಾಗಿದೆ ಅನ್ನೋ ಅಂಶ ತಿಳಿದು ಬಂದಿದೆ.

ದೇಶದಲ್ಲಿ ಕಾಂಡೋಮ್​ಗಳ ಮಾರಾಟ ಹೆಚ್ಚಾಗಿದ್ದು ಇದರನ್ವಯ ಕುಟುಂಬ ಯೋಜನೆಯಲ್ಲಿ ಪುರುಷರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಈ ಬದಲಾವಣೆ 22 ರಾಜ್ಯಗಳ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲಿಯೂ ಕಂಡು ಬಂದಿದೆ ಎಂದು ಭಾರತದ ಜನಸಂಖ್ಯಾ ಮಂಡಳಿಯ ಡಾ. ರಾಜೀವ್​ ಆಚಾರ್ಯ ಹೇಳಿದ್ದಾರೆ.

ಅದರಲ್ಲೂ ಮುಂಬೈನಲ್ಲಿ ಪ್ರತಿ 10 ಪುರುಷರಲ್ಲಿ ಇಬ್ಬರು ಕಾಂಡೋಮ್​ ಖರೀದಿ ಮಾಡುತ್ತಿದ್ದು ಈ ಮೂಲಕ ಕಾಂಡೋಮ್​ ಖರೀದಿಯಲ್ಲಿ ಮುಂಬೈ ಅಗ್ರಗಣ್ಯ ಸ್ಥಾನವನ್ನ ಪಡೆದಿದೆ. ಕಳೆದ 5 ವರ್ಷಗಳಲ್ಲಿ ಕಾಂಡೋಮ್​ಗಳ ಬಳಕೆ ಹೆಚ್ಚಾಗುತ್ತಿರೋದನ್ನ ನೋಡಿದ್ರೆ ಪುರುಷರು ಜನನ ನಿಯಂತ್ರಣಕ್ಕಾಗಿ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಭಾರತ ಕುಟುಂಬ ಯೋಜನಾ ಸಂಘಡ ಡಾ. ಮನಿಷಾ ಭೀಸೆ ಹೇಳಿದ್ದಾರೆ.

- Advertisement -
spot_img

Latest News

error: Content is protected !!