Saturday, June 6, 2026
Homeಕರಾವಳಿಬೆಳ್ತಂಗಡಿ; ಆಯುಧ ಪೂಜೆ ವೇಳೆ ಹೃದಯಾಘಾತದಿಂದ ಯುವಕ ಸಾವು

ಬೆಳ್ತಂಗಡಿ; ಆಯುಧ ಪೂಜೆ ವೇಳೆ ಹೃದಯಾಘಾತದಿಂದ ಯುವಕ ಸಾವು

- Advertisement -
- Advertisement -

ಬೆಳ್ತಂಗಡಿ; ಆಯುಧಪೂಜೆ ವೇಳೆ ಹೃದಯಾಘಾತದಿಂದ ಯುವಕ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.ಅತ್ತಾಜೆ ರಮೇಶ್ ಭಟ್ ಮತ್ತು ಶಾರದ ದಂಪತಿಯ ಪುತ್ರ ಆದಿತ್ಯ ಭಟ್ (29) ಮೃತ ದುರ್ದೈವಿ.

ಆದಿತ್ಯ ಅವರು ಶುಕ್ರವಾರ ತಮ್ಮ ಮನೆಯಲ್ಲಿ ನಡೆದ ಆಯುಧ ಪೂಜಾ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ನಂತರ, ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಬಳಿಕ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಆದಿತ್ಯ ಅವರು ಜರ್ಮನಿಯಲ್ಲಿ ಸ್ವಂತ ಸ್ಟಾರ್ಟಪ್ ನಡೆಸುತ್ತಿದ್ದರು. ಅವರು ತಂದೆ-ತಾಯಿ, ಸಹೋದರಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!