Wednesday, June 26, 2024
Homeಉತ್ತರ ಕನ್ನಡಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಠಾಣೆ ಎದುರೇ ಯುವಕ ಆತ್ಮಹತ್ಯೆಗೆ ಯತ್ನ; ಚಿಕಿತ್ಸೆ ಫಲಿಸದೇ ಯುವಕ...

ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಠಾಣೆ ಎದುರೇ ಯುವಕ ಆತ್ಮಹತ್ಯೆಗೆ ಯತ್ನ; ಚಿಕಿತ್ಸೆ ಫಲಿಸದೇ ಯುವಕ ಸಾವು

spot_img
- Advertisement -
- Advertisement -

ಉತ್ತರಕನ್ನಡ; ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಠಾಣೆ ಎದುರೇ ಯುವಕ ಆತ್ಮಹತ್ಯೆಗೆ ಯತ್ನಿಸಿ ಕೊನೆಗೆ ಚಿಕಿತ್ಸೆ ಫಲಿಸದೇ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ  ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ. ಭಾಸ್ಕರ್ ಬೋಂಡೆಲ್ಕರ್​​ ಮೃತಪಟ್ಟ ಯುವಕ.

 ರಾಮನಗರದ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಮನಗರ ಪಿಎಸ್​ಐ ಬಸವರಾಜ ವಿರುದ್ಧ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ​ದೂರು ನೀಡಿದ್ದರು. ಹಿರಿಯ ಅಧಿಕಾರಿಗಳಿಗೆ ದೂರು ನೀಡಿದಕ್ಕೆ ಭಾಸ್ಕರ್​ ಅವರಿಗೆ ಪಿಎಸ್​ಐ ಬಸವರಾಜ ನಿರಂತರ ಕಿರುಕಳ ಕೊಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಪಿಎಸ್ಐ ಬಸವರಾಜ ಕಿರುಕಳಕ್ಕೆ ಬೇಸತ್ತು ಭಾಸ್ಕರ್​​ ರಾಮನಗರ ಬಿಟ್ಟು ಜೋಯಿಡಾದಲ್ಲಿ ಕೆಲಸಕ್ಕೆ ಸೇರಿದ್ದರು. ಕೆಲ ದಿನಗಳ ಹಿಂದೆ ಜಮೀನು ವಿಚಾರದಲ್ಲಿ ಪೊಲೀಸರು ಭಾಸ್ಕರ ಅವರ ಮಾವ ಗಣಪತಿಗೆ ಅವರಿಗೆ ನೋಟಿಸ್ ಕೊಟ್ಟಿದ್ದರು. ಇದನ್ನು ತಿಳಿದ ಭಾಸ್ಕರ್, ನನಗೆ ಪೀಡಿಸುತ್ತಿದ್ದ ಪೊಲೀಸರು ಈಗ ನನ್ನ ಮಾವನಿಗೂ ಪೀಡಿಸುತ್ತುದ್ದಾರೆಂದು ಭಾವಿಸಿ ಜೂನ್ 13 ರಂದು ಮಧ್ಯಪಾನ ಮಾಡಿ ಠಾಣೆಗೆ ಹೋಗಿ ನೋಟಿಸ್ ಕೊಟ್ಟಿರುವುದಕ್ಕೆ ಪ್ರಶ್ನಿಸಿದ್ದರು.

ಈ ವೇಳೆ ಪೊಲೀಸರು ಸರಿಯಾಗಿ ಸ್ಪಂದಿಸದೆ ಭಾಸ್ಕರ್​ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಭಾಸ್ಕರ್​ ಪೊಲೀಸ್​ ಠಾಣೆ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಬೆಂಕಿ ಹಂಚಿಕೊಂಡಿದನ್ನು ಕಂಡ ಪೊಲೀಸರು ಕೂಡಲೆ ಬೆಂಕಿ ನಂದಿಸಿದ್ದಾರೆ. ಅರ್ಧ ದೇಹ ಸುಟ್ಟು, ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಎಲ್​ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಫಲಕಾರಿಯಾಗದೆ ಶನಿವಾರ ಆಸ್ಪತ್ರೆಯಲ್ಲೇ ಭಾಸ್ಕರ್ ಮೃತಪಟ್ಟಿದ್ದಾರೆ.

- Advertisement -
spot_img

Latest News

error: Content is protected !!