Friday, June 5, 2026
Homeಕರಾವಳಿಕಡಬ; ಕರುವಿನ ಕುತ್ತಿಗೆಯಲ್ಲಿದ್ದ ಹಗ್ಗದಿಂದಲೇ ಆತ್ಮಹತ್ಯೆ ಮಾಡಿಕೊಂಡ ಯುವಕ

ಕಡಬ; ಕರುವಿನ ಕುತ್ತಿಗೆಯಲ್ಲಿದ್ದ ಹಗ್ಗದಿಂದಲೇ ಆತ್ಮಹತ್ಯೆ ಮಾಡಿಕೊಂಡ ಯುವಕ

- Advertisement -
- Advertisement -

ಕಡಬ; ಕರುವಿನ ಕುತ್ತಿಗೆಯಲ್ಲಿದ್ದ ಹಗ್ಗದಿಂದಲೇ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಯಿಲ ಗ್ರಾಮದ ಏಣಿತ್ತಡ್ಕದಲ್ಲಿ  ನಡೆದಿದೆ.

ಏಣಿತ್ತಡ್ಕ ದಿ.ಈಶ್ವರ ನಾಯ್ಕರವರ ಪುತ್ರ ಉಮೇಶ್ (36 ವ.) ಆತ್ಮಹತ್ಯೆ ಮಾಡಿಕೊಂಡವರು.

ಮಧ್ಯಾಹ್ನ ಊಟ ಮಾಡಿದ ಬಳಿಕ ಮನೆಯಿಂದ ಹೊರ ಹೋದವರು ತೋಟದಲ್ಲಿ ಕಟ್ಟಿ ಹಾಕಿದ್ದ ಕರುವಿನ ಕುತ್ತಿಗಡಯಿಂದ ಹಗ್ಗ ಬಿಚ್ಚಿಸಿಕೊಂಡು ಆ ಹಗ್ಗದಿಂದ ತೋಟದ ಬದಿಯಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂಜೆ ವೇಳೆಗೆ ಮೃತರ ತಾಯಿ ತೋಟಕ್ಕೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ಖಿನ್ನತೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಸಹೋದರ ಮಹಾಲಿಂಗ ನಾಯ್ಕ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!