Monday, May 13, 2024
Homeಕರಾವಳಿಬೆಳ್ತಂಗಡಿ : ತುರ್ತು ಸೇವೆಗಾಗಿ ಸಾಗುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಕಾರು ಚಾಲಕ

ಬೆಳ್ತಂಗಡಿ : ತುರ್ತು ಸೇವೆಗಾಗಿ ಸಾಗುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಕಾರು ಚಾಲಕ

spot_img
- Advertisement -
- Advertisement -

ಬೆಳ್ತಂಗಡಿ : ತುರ್ತು ಸೇವೆಯಲ್ಲಿ ಹೋಗುತ್ತಿದ್ದ ಪಶು ಇಲಾಖೆಯ ವಾಹನದ ಚಾಲಕನ ಮೇಲೆ ಕ್ಷುಲ್ಲಕ ವಿಚಾರದಲ್ಲಿ ಆಂಬ್ಯುಲೆನ್ಸ್ ಬಾಗಿಲು ತೆಗೆದು ಕೈಯಿಂದ ಮತ್ತು ಕಾಲಿನಿಂದ ಹಲ್ಲೆ ಮಾಡಿದ ಘಟನೆ ಇಂದು ಬೆಳ್ತಂಗಡಿಯಲ್ಲಿ ನಡೆದಿದೆ‌‌. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನದ 1962 ಗೆ ಕಾಲ್ ಸೆಂಟರ್ ಗೆ ದನದ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕಿನ ನೆರಿಯಕ್ಕೆ ತುರ್ತು ಸೇವೆಯಲ್ಲಿ ತೆರಳುತ್ತಿದ್ದ  ಆಂಬ್ಯುಲೆನ್ಸ್ ಚಾಲಕನ ಮೇಲೆ ಲಾಯಿಲ ಜಂಕ್ಷನ್ ನಲ್ಲಿ ದಾರಿ ಬಿಡುವ ವಿಚಾರದಲ್ಲಿ ಕಾರು ಚಾಲಕ ಶರತ್ ಎಂಬಾತ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳ್ತಂಗಡಿಯ ಲಾಯಿಲ ಜಂಕ್ಷನ್ ನಲ್ಲಿ ಮಾ.12 ರಂದು  ನಡೆದಿದೆ.

ಹಲ್ಲೆ ಮಾಡಿದ ಕಾರಿನ ಚಾಲಕ: ಹಲ್ಲೆ ಮಾಡಿದ ಕಾರಿನ ಚಾಲಕ ಬೆಂಗಳೂರಿನ ಮಲ್ಲೇಶ್ವರಂನ ನಿವಾಸಿ HDFC ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿರುವ ಶರತ್(40) ಎಂದು ಗುರುತಿಸಲಾಗಿದೆ. ಗಂಡ ಹೆಂಡತಿ ಮಗು ಮತ್ತು ತಾಯಿ ಜೊತೆ ಒಟ್ಟು ನಾಲ್ಕು ಜನ ದೇವಾಲಯಗಳಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಕಾರು ಮತ್ತು ಹಲ್ಲೆ ಮಾಡಿದ ಶರತ್ ನನ್ನು ಬೆಳ್ತಂಗಡಿ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ‌.

ಹಲ್ಲೆಗೊಳಗಾದ  ಆಂಬ್ಯುಲೆನ್ಸ್ ಚಾಲಕ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸರಕಾರಿ ಆಂಬ್ಯುಲೆನ್ಸ್ ನಲ್ಲಿ ಹೊರ ಗುತ್ತಿಗೆದಾರ ಚಾಲಕರಾಗಿರುವ  ಸುಬ್ರಮಣ್ಯ ನಿವಾಸಿ  ರಕ್ಷಿತ್(27) ಹಲ್ಲೆಗೊಳಗಾದ ಚಾಲಕನಾಗಿದ್ದಾರೆ. ಅವರನಲನ್ನು ಬೆಳ್ತಂಗಡಿ ತಾಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಡಬ ಆಂಬ್ಯುಲೆನ್ಸ್ :ಬೆಳ್ತಂಗಡಿ ಪಶು ಇಲಾಖೆ ವಾಹನದ ಚಾಲಕ ರಜೆ ಇದ್ದ ಕಾರಣ 1962 ಗೆ ಕಾಲ್ ಸೆಂಟರ್ ಗೆ ದನದ ಚಿಕಿತ್ಸೆಗಾಗಿ ನೆರಿಯದಿಂದ  ಕರೆ ಬಂದ ಕಾರಣ ಬೆಳ್ತಂಗಡಿ ಪಶು ಇಲಾಖೆಗೆ ಕಡಬದಿಂದ ಬಂದ  ಆಂಬ್ಯುಲೆನ್ಸ್  ನೆರಿಯ ಕಡೆ  ಹೊರಟು ಲಾಯಿಲ ಜಂಕ್ಷನ್ ಹೋಗುವಾಗ ಎದುರಿನಿಂದ ಬಂದು ಕಾರು ಚಾಲಕ ಅಡ್ಡ ಬಂದದ್ದನ್ನು ಪ್ರಶ್ನಿಸಿದಾಗ ಹಲ್ಲೆ ಮಾಡಲಾಗಿದೆ‌.

- Advertisement -
spot_img

Latest News

error: Content is protected !!