Thursday, June 4, 2026
Homeಕರಾವಳಿಕಾರ್ಕಳ: ಮೆಸ್ಕಾಂ ಇಲಾಖೆಯ ಗುತ್ತಿಗೆ ನೌಕರ ಆತ್ಮಹತ್ಯೆ

ಕಾರ್ಕಳ: ಮೆಸ್ಕಾಂ ಇಲಾಖೆಯ ಗುತ್ತಿಗೆ ನೌಕರ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ: ಮೆಸ್ಕಾಂ ಇಲಾಖೆಯ ಗುತ್ತಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ಜಾರ್ಕಳ ಮುಂಡ್ಲಿ ಗ್ರಾಮದ ಕಾಂತ ಬೆಟ್ಟು ಎಂಬಲ್ಲಿ ನಡೆದಿದೆ. ಸಂದೀಪ ಶೆಟ್ಟಿ(30)  ಆತ್ಮಹತ್ಯೆ ಮಾಡಿಕೊಂಡವರು. ಸಂದೀಪ್ ಶೆಟ್ಟಿ ಕೆಲಸ ಖಾಯಂ ಆಗದ ಹಿನ್ನೆಲೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರ್ಕಳದ ಮೆಸ್ಕಾಂ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಿಕೊಂಡಿದ್ದ ಸಂದೀಪ್ ಅವರ, ಕೆಲಸ ಖಾಯಂ ಆಗಿರಲಿಲ್ಲ. ಇದೇ ವಿಚಾರದಲ್ಲಿ ಮನನೊಂದ ಇವರು, ಜೀವನದಲ್ಲಿ ಜಿಗುಪ್ಸೆಗೊಂಡು ಎಂಬಲ್ಲಿರುವ ತಂಗಿಯ ಮನೆಯ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!