- Advertisement -
![]()
- Advertisement -
ಮಂಗಳೂರು: ಶಕ್ತಿ ಯೋಜನೆ ಜಾರಿಯಾದ ಬೆನ್ನಲ್ಲೇ ಕರೆಂಟ್ ಬಿಲ್ ಹೆಚ್ಚಳವಾಗಿದೆ. ನಮಗೆ ಪ್ರತಿ ಸಲಕ್ಕಿಂತ ಈ ಬಾರಿ ಜಾಸ್ತಿ ಅಂತಾ ಪ್ರತಿಯೊಬ್ಬರು ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಮಂಗಳೂರಿನ ಉಳ್ಳಾಲ ಮೂಲದ ವ್ಯಕ್ತಿಗೆ ಬರೋಬ್ಬರಿ 7 ಲಕ್ಷ ದ 71 ಸಾವಿರದ 72 ರೂಪಾಯಿ ವಿದ್ಯುತ್ ಬಿಲ್ ಬಂದಿದೆ
ಇಷ್ಟೊಂದು ದೊಡ್ಡ ಮೊತ್ತದ ಕರೆಂಟ್ ಬಿಲ್ ಕಂಡು ಮನೆ ಮಾಲೀಕ ಉಳ್ಳಾಲಬೈಲಿನ ನಿವಾಸಿ ಸದಾಶಿವ ಆಚಾರ್ಯ ಅಚ್ಚರಿಗೊಂಡಿದ್ದಾರೆ. ಕೂಡಲೇ ಕುಟುಂಬದ ಸದಸ್ಯರು ಮೆಸ್ಕಾಂ ಕಚೇರಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಅವರು ಮೀಟರ್ ರೀಡರ್ ನಿಂದ ಆಗಿರಬಹುದಾದ ತಪ್ಪನ್ನು ಸರಿಪಡಿಸುವ ಭರವಸೆ ನೀಡಿದ್ದಾರಂತೆ.
- Advertisement -


