Monday, August 31, 2026
Homeಅಪರಾಧಮಂಗಳೂರು: ಪತ್ನಿಯ ಕಿರಿಕಿರಿ ತಾಳಲಾಗದೆ ಯುವಕ ಆತ್ಮಹತ್ಯೆ!

ಮಂಗಳೂರು: ಪತ್ನಿಯ ಕಿರಿಕಿರಿ ತಾಳಲಾಗದೆ ಯುವಕ ಆತ್ಮಹತ್ಯೆ!

- Advertisement -
- Advertisement -

ಮಂಗಳುರು: ಪತ್ನಿಯಿಂದ ಕಿರಿಕಿರಿ ಆಗುತ್ತಿದೆಯೆಂದು ಯುವಕನೊಬ್ಬ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಎಡಪದವು-ಗಂಜಿಮಠದ ಯುವಕ ಸತೀಶ್ ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. “ನಾನು ಗುರುಪುರದ ಸೇತುವೆಯಿಂದ ಹೊಳೆಗೆ ಹಾರಿ ಸಾಯುತ್ತಿದ್ದೇನೆ. ಮನೆಯಲ್ಲಿ ಪತ್ನಿಯಿಂದ ಕಿರಿಕಿರಿ ಆಗುತ್ತಿದೆ. ಪತ್ನಿಯ ಕಿರಿಕಿರಿಯಿಂದ ಜೀವನವೇ ಬೇಡವಾಗಿದೆ. ನನ್ನ ಸ್ಕೂಟಿ ಮೊಬೈಲ್ ಸೇತುವೆಯ ಮೇಲಿದ್ದು, ನನ್ನನ್ನು ಕ್ಷಮಿಸಿ” ಎಂದು ತನ್ನ ಆತ್ಮೀಯರೊಬ್ಬರಿಗೆ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ಸತೀಶ್ ಅವರು ಗಂಜಿಮಠ ಸಮೀಪ ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದು, ಅವರ ಮೃತದೇಹ ಮರವೂರು ಸೇತುವೆಯ ಹೊಳೆಯಲ್ಲಿ ಪತ್ತೆಯಾಗಿದೆ.

- Advertisement -

Latest News

error: Content is protected !!