- Advertisement -
- Advertisement -
ಮಣಿಪಾಲ: ಇಲ್ಲಿನ ಆಸ್ಪತ್ರೆಯೊಂದರಲ್ಲಿ ಎಂಬಿಬಿಎಸ್ ಇಂಟರ್ನ್ ಮಾಡಿಕೊಂಡಿದ್ದ ಯುವ ವೈದ್ಯೆಯೋರ್ವಳು ಉಸಿರಾಟ ಸಮಸ್ಯೆಯಿಂದ ಬಳಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಸಾವನ್ನಪ್ಪಿದ ಯುವತಿ ಜಾರ್ಖಂಡ್ ನ ರಾಂಚಿ ಮೂಲದ 24 ವರ್ಷದ ಪ್ರಿಯಾ ಎನ್ನಲಾಗಿದೆ.
ಈಕೆ ತನ್ನ ಸ್ನೇಹಿತನೊಂದಿಗೆ ಮಣಿಪಾಲದ ಗೇಮಿಂಗ್ ಜೋನ್ ಗೆ ತೆರಳಿದ್ದ ವೇಳೆ ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ತಕ್ಷಣವೇ ಆಕೆಯನ್ನು ಸ್ನೇಹಿತ ಆಟೋದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಈಕೆಯನ್ನು ಪರೀಕ್ಷಿಸಿದ ವೈದ್ಯರು ಪ್ರಿಯಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಯುವತಿಯ ತಂದೆ ಮನೋಜ್ ಶರ್ಮಾ ಅವರು ನೀಡಿದ ದೂರಿನಂತೆ ಭಾರತೀಯ ದಂಡ ಸಂಹಿತೆ ಕಲಂ 194ರ ಅಡಿ ಪ್ರಕರಣ ದಾಖಲಾಗಿದೆ.
- Advertisement -