Wednesday, June 24, 2026
Homeಕರಾವಳಿಮಂಗಳೂರುಬಂಟ್ವಾಳ; ಬೈಕ್ ತೋಡಿಗೆ ಬಿದ್ದು ಬೈಕ್ ಸವಾರ ಸಾವು

ಬಂಟ್ವಾಳ; ಬೈಕ್ ತೋಡಿಗೆ ಬಿದ್ದು ಬೈಕ್ ಸವಾರ ಸಾವು

- Advertisement -
- Advertisement -

ಬಂಟ್ವಾಳ; ಬೈಕ್ ತೋಡಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಪಚ್ಚಿನಡ್ಕ ಎಂಬಲ್ಲಿ ನಡೆದಿದೆ. ಕಳ್ಳಿಗೆ ಗ್ರಾಮದ ನಿವಾಸಿ ಮೆಲ್ರೋಯಿ ಡೇಸಾ ( 24) ಮೃತ ವ್ಯಕ್ತಿ.

ಮೆಲ್ರೋಯಿ ಡೇಸಾ ಅವರು ಬ್ರಹ್ಮರಕೋಟ್ಲ ಕಡೆಯಿಂದ ಪಚ್ಚಿನಡ್ಕ ಕಡೆಗೆ ಬರುತ್ತಿರುವ ವೇಳೆ ಬೈಕ್ ತೀರಾ ರಸ್ತೆಯ ಬದಿಗೆ ಸರಿದು ಬಳಿಕ ನಿಯಂತ್ರಣ ‌ಕಳೆದು ತೋಡಿಗೆ ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕೊಂಡು ಹೋಗಿ ವೈದ್ಯರು ಪರೀಕ್ಷೆ ನಡೆಸಿದಾಗ ಮೃತಪಟ್ಟಿರೋದಾಗಿ ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಪಾಣೆಮಂಗಳೂರು ‌ಟ್ರಾಫಿಕ್ ಎಸ್ ಐ ಸುತೇಶ್ ಬೇಟಿ‌ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!