Wednesday, June 3, 2026
Homeಕರಾವಳಿಬಂಟ್ವಾಳ: ವ್ಯಕ್ತಿಯ ಮೇಲೆ ತಲ್ವಾರ್ ನಿಂದ ದಾಳಿ

ಬಂಟ್ವಾಳ: ವ್ಯಕ್ತಿಯ ಮೇಲೆ ತಲ್ವಾರ್ ನಿಂದ ದಾಳಿ

- Advertisement -
- Advertisement -

ಬಂಟ್ವಾಳ: ವ್ಯಕ್ತಿಯ ಮೇಲೆ ತಲ್ವಾರ್ ನಿಂದ ದಾಳಿ ಮಾಡಿರುವ ಘಟನೆ ಬಂಟ್ವಾಳ ‌ನಗರ ಪೋಲೀಸ್ ‌ಠಾಣಾ ವ್ಯಾಪ್ತಿಯ ನೆಹರು‌ನಗರ ಎಂಬಲ್ಲಿ ಮಧ್ಯ ರಾತ್ರಿ ವೇಳೆ ‌ನಡೆದಿದೆ.

ನೆಹರು ನಗರ ನಿವಾಸಿ ತಸ್ಲೀಮ್ ತಲ್ವಾರ್ ದಾಳಿಗೆ ಒಳಗಾದ ಯುವಕ. ಗಂಭೀರವಾಗಿ ಗಾಯಗೊಂಡ ಈತನನ್ನು ಮಂಗಳೂರು ‌ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಈತ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಸ್ಲೀಮ್ ಎಂಬಾತ ಪಾಣೆಮಂಗಳೂರು ‌ನೆಹರು ನಗರದಲ್ಲಿರುವ ಹೈವೆ ಹೋಟೆಲ್‌ ‌ಪಕ್ಕದಲ್ಲಿ ಮೊಬೈಲ್ ಶಾಪ್ ಹೊಂದಿದ್ದು, ಅಂಗಡಿ ಬಂದ್ ಮಾಡುವಾಗ ದಾಳಿ ನಡೆದಿದೆ.

ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಈತನ ಮೇಲೆ ಅಟ್ಯಾಕ್ ಮಾಡಲಾಗಿದೆ ಎನ್ನಲಾಗಿದೆ. ಈತನ‌ ಸ್ನೇಹಿತ ಮತ್ತು ಇದೇ ಪರಿಸರದ ಹ್ಯಾರೀಸ್ ಎಂಬಾತ ತಲವಾರಿನಿಂದ ‌ಕಡಿದು ಪರಾರಿಯಾಗಿದ್ದಾನೆ ಎಂದು ‌ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ.ಇದೀಗ ‌ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ‌ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ, ಎಸ್.ಐ.ರಾಮಕೃಷ್ಣ ಬೇಟಿ ನೀಡಿ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!