ಮೈಸೂರು: ಸೋಮವಾರ ಮೈಸೂರಿನಲ್ಲಿ ಜರುಗಿದ ಅಖಿಲ ಭಾರತ ವಾಕ್ ಮತ್ತು ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿ ನಡುವೆ ಕನ್ನಡ ಭಾಷೆ ಕುರಿತು ಮಾತುಕತೆ ನಡೆದಿದೆ.
ಸಮಾರಂಭದಲ್ಲಿ ಮೊದಲು ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಭಾಷಣದ ಆರಂಭದಲ್ಲಿ ಯು ನೋ ಕನ್ನಡ? ಎಂದು ಮುಖ್ಯ ಅತಿಥಿಯಾಗಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪ್ರಶ್ನಿಸಿದರು.
ನಿಮಗೆ ಕನ್ನಡ ಬರುತ್ತಾ ಎಂದು ರಾಷ್ಟ್ರಪತಿಗಳಿಗೆ ಪ್ರಶ್ನಿಸಿ, ಐ ಸ್ಪೀಕ್ ಕನ್ನಡ ಎಂದು ಭಾಷಣ ಆರಂಭಿಸಿದ ಸಿಎಂ ಸಿದ್ದರಾಮಯ್ಯ ಕನ್ನಡದಲ್ಲಿ ಭಾಷಣ ಮಾಡಿದರು.
ನಂತರ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಎಲ್ಲಾ ಭಾಷೆಗಳು ನನಗೆ ಇಷ್ಟ ಕನ್ನಡವು ಸ್ವಲ್ಪ ಸ್ವಲ್ಪ ಅರ್ಥ ಆಗುತ್ತದೆ ಸಿಎಂ ಮಾತಿಗೆ ಉತ್ತರಿಸಿದರು.
ಮೈಸೂರಿನಲ್ಲಿ ನಡೆದ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.


