Saturday, May 18, 2024
Homeತಾಜಾ ಸುದ್ದಿಸುಲಭವಾಗಿ ಹಣ ಗಳಿಸಲು ಸರಳ ಉಪಾಯ ಹೇಳಿದ ಕೇಂದ್ರ ಸಾರಿಗೆ ಸಚಿವರು: ನೋ ಪಾರ್ಕಿಂಗ್ ನಲ್ಲಿ...

ಸುಲಭವಾಗಿ ಹಣ ಗಳಿಸಲು ಸರಳ ಉಪಾಯ ಹೇಳಿದ ಕೇಂದ್ರ ಸಾರಿಗೆ ಸಚಿವರು: ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಿಸಿದ್ದ ಫೋಟೋ ತೆಗೆದು ಕಳುಹಿಸಿದ್ರೆ ಸಿಗುತ್ತೆ 500 ರೂಪಾಯಿ

spot_img
- Advertisement -
- Advertisement -

ನವದೆಹಲಿ : ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಹೊಸ ಕಾನೂನು ತರಲು ಕೇಂದ್ರ ಸರಕಾರ ಮುಂದಾಗಿದೆ. ಅದಕ್ಕಾಗಿ ಕೇಂದ್ರ ಸಾರಿಗೆ ಇಲಾಖೆ ಭರ್ಜರಿ ಪ್ಲ್ಯಾನ್ ಒಂದನ್ನು ಮಾಡಿದೆ.  ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿರುವ ವಾಹನದ ಫೋಟೋ ಕಳುಹಿಸಿಕೊಟ್ಟರೆ ದಂಡದ 500 ರೂಪಾಯಿ ಬಹುಮಾನವಾಗಿ ನೀಡಲು ಚಿಂತನೆ ನಡೆಸಿದೆ.


ನೋಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿದರೆ ದಂಡವಾಗಿ 1000 ರೂಪಾಯಿ ಆಗಿದ್ದು, ಅದರಲ್ಲಿ 500 ಚಿತ್ರವನ್ನು ಕ್ಲಿಕ್ ಮಾಡುವ ವ್ಯಕ್ತಿಗೆ ಹೋಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಭಾರತದ ನಗರ ಪ್ರದೇಶಗಳಲ್ಲಿ ಕಾರುಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ನೋಪಾರ್ಕಿಂಗ್ ಗಳಲ್ಲಿ ವಾಹನ ನಿಲ್ಲಿಸುವುದು ಹೆಚ್ಚಾಗುತ್ತಿದೆ. ಇದು ದೊಡ್ಡ ಅಪಾಯ ಎಂದ ಅವರು ಕುಟುಂಬದ ಪ್ರತಿಯೊಬ್ಬ ಸದಸ್ಯರು ಕಾರು ಹೊಂದಿರುತ್ತಾರೆ. ಆದರೆ ಪಾರ್ಕಿಂಗ್ ಗೆ ಸ್ಥಳಗಳಲ್ಲಿ ನಿಲ್ಲಿಸುತ್ತಿಲ್ಲ ಎಂದಿದ್ದಾರೆ. ಹಾಗಾಗಿ ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ನಿತಿನ್ ಗಡ್ಕರಿ ಈ ಉಪಾಯ ಮಾಡಿದ್ದಾರೆ.

- Advertisement -
spot_img

Latest News

error: Content is protected !!