Saturday, June 6, 2026
HomeUncategorizedಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕ ನೇಣಿಗೆ ಶರಣು!..

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕ ನೇಣಿಗೆ ಶರಣು!..

- Advertisement -
- Advertisement -

ಬ್ರಹ್ಮಾವರ: ಇಲ್ಲಿನ ಬೈಕಾಡಿ ಗಾಂಧಿನಗರದಲ್ಲಿ 20 ವರ್ಷದ ಯುವಕ ಮಾನಸಿಕ ಖಿನ್ನತೆಗೆ ಒಳಗಾಗಿ ನೇಣಿಗೆ ಶರಣಾದ ಘಟನೆ ನಡೆದಿದೆ.ಮೃತ ಯುವಕನನ್ನು ಅಕ್ಷಯ್‌‌ ಕುಮಾರ್‌‌ ‌(20) ಎಂದು ಗುರುತಿಸಲಾಗಿದೆ.ಬ್ರಹ್ಮಾವರದ ಮಹೇಶ್‌ ಹಾರ್ಡವೇರ್‌‌ನಲ್ಲಿ ಕೆಲಸ ಮಾಡಿಕೊಂಡಿದ್ದ ಅಕ್ಷಯ್‌ ಕೊರೊನಾ ಕಾರಣದಿಂದ ಕಳೆದ 3 ತಿಂಗಳಿನಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದನು.
ಇತ್ತೀಚಿಗೆ ಮಾನಸಿಕ ಖಿನ್ನತೆಗೆ ಒಳಗಾಗಿ, ಗುರುವಾರ ಮಧ್ಯಾಹ್ನ ಮನೆಯ ಮಲಗುವ ಕೋಣೆಯ ಮರದ ಜಂತಿಗೆ ಕಾವಿ ಬಟ್ಟೆಯ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ವೈದ್ಯರು ಯುವಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!