Wednesday, June 24, 2026
Homeತಾಜಾ ಸುದ್ದಿಭಾರೀ ಅನಾಹುತವೊಂದರಿಂದ ಸ್ವಲ್ಪದರಲ್ಲೇ ಪಾರಾದ ಯೋಗಿ ಆದಿತ್ಯನಾಥ್

ಭಾರೀ ಅನಾಹುತವೊಂದರಿಂದ ಸ್ವಲ್ಪದರಲ್ಲೇ ಪಾರಾದ ಯೋಗಿ ಆದಿತ್ಯನಾಥ್

- Advertisement -
- Advertisement -

ವಾರಣಾಸಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿದ ಘಟನೆ ವಾರಣಾಸಿಯಲ್ಲಿ ವರದಿಯಾಗಿದೆ. ಹಕ್ಕಿಯೊಂದು ಹೆಲಿಕಾಪ್ಟರ್‌ಗೆ ಬಡಿದ ಪರಿಣಾಮ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಆದಿತ್ಯನಾಥ್ ಭಾರೀ ಅಪಾಯವೊಂದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

‘ವಾರಣಾಸಿಯಿಂದ ಲಖನೌಗೆ ಸಿಎಂ ಆದಿತ್ಯನಾಥ್‌ ಹೆಲಿಕಾಪ್ಟರ್‌ನಲ್ಲಿ ಹೊರಟಿದ್ದಾಗ ಹಕ್ಕಿಯೊಂದು ಡಿಕ್ಕಿಯಾಗಿದ್ದು, ಪರಿಣಾಮವಾಗಿ ತುರ್ತು ಭೂಸ್ಪರ್ಶ ಮಾಡಲಾಯಿತು’ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕೌಶಲ್‌ರಾಜ್‌ ಶರ್ಮಾ ತಿಳಿಸಿದ್ದಾರೆ. ಶನಿವಾರ ಯೋಗಿ ಆದಿತ್ಯನಾಥ್‌ ಅವರು ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಆಗಮಿಸಿದ್ದರು.

- Advertisement -

Latest News

error: Content is protected !!