Thursday, June 4, 2026
Homeಕರಾವಳಿಪುತ್ತೂರಿನ ತಮ್ಮ ಆತ್ಮೀಯರೊಬ್ಬರ ಮದುವೆಗೆ ಆಗಮಿಸಿದ ಯೋಗಿ ಆದಿತ್ಯನಾಥ್ : ಸೋಷಿಯಲ್ ಮೀಡಿಯಾದಲ್ಲಿ...

ಪುತ್ತೂರಿನ ತಮ್ಮ ಆತ್ಮೀಯರೊಬ್ಬರ ಮದುವೆಗೆ ಆಗಮಿಸಿದ ಯೋಗಿ ಆದಿತ್ಯನಾಥ್ : ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

- Advertisement -
- Advertisement -

ಪುತ್ತೂರು : ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ತಮ್ಮ ವ್ಯಕ್ತಿತ್ವದಿಂದಲೇ ಗಮನ ಸೆಳೆದವರು. ಉತರ ಪ್ರದೇಶದ ಮುಖ್ಯಮಂತ್ರಿಯಾದ ಮೇಲಂತೂ ಅವರ ಅಭಿಮಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಇದೇ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಬಂದಿದ್ದರು ಅಂದ್ರೆ ನೀವೆಲ್ಲಾ ಶಾಕ್ ಆಗ್ಬೋದು.

ಹೌದು.. ಈ ವಿಚಾರ ನಿಮಗೆಲ್ಲಾ ಅಚ್ಚರಿ ಮುಡಿಸಬಹುದು. ಅಷ್ಟಕ್ಕೂ ಇಲ್ಲಿ ಆಗಿರೋದು ಏನು ಗೊತ್ತಾ? ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕ ರತ್ನಾವತಿ ಹಾಗೂ ನಾರಾಯಣ ಬಲ್ಯಾಯರ ಪುತ್ರ ಆರ್ಲಪದವಿನ ಸ್ವಸ್ತಿಕ್ ಜ್ಯೋತಿಷ್ಯಾಲಯದ  ಲೋಕೇಶ್  ಬಲ್ಯಾಯ ಹಾಗೂ ಕಾವ್ಯಶ್ರೀ ಅವರ ವಿವಾಹ ಸಮಾರಂಭ ಜುಲೈ 7 ರಂದು ನಡೆದಿತ್ತು. ಈ ಮದುವೆ ಸಮಾರಂಭದಲ್ಲಿ ಯೋಗಿ ಆದಿತ್ಯ ನಾಥ್ ಅವರೇ ಮದುವೆಗೆ ಬಂದಂತೆ ಅಣಕು ಪ್ರದರ್ಶನವೊಂದನ್ನು ಮಾಡಲಾಗಿತ್ತು.

ಯೋಗಿ ಆದಿತ್ಯನಾಥ್ ಅವರನ್ನೇ ಹೋಲುವ ಮದುಮಗನ ಚಿಕ್ಕಪ್ಪ ಸುಬ್ರಮಣ್ಯ ಬಲ್ಯಾಯ ಅವರು ಯೋಗಿ ಆದಿತ್ಯನಾಥ್ ಅವರಂತೆ ಉಡುಪು ಧರಿಸಿ ಬಂದು, ನವದಂಪತಿಗೆ ಶುಭ ಹಾರೈಸಿದ್ದಾರೆ. ಇವರು ಮದುವೆ ಸಮಾರಂಭಕ್ಕೆ ಬಂದ ಆ ಕ್ಷಣವನ್ನು ಖ್ಯಾತ ಫೋಟೋಗ್ರಾಫರ್ ಅರುಣ್ ಪುತ್ತೂರು ಅವರು ತಮ್ಮ ಕ್ಯಾಮರಾದಲ್ಲಿ ಸೆರೆ  ಹಿಡಿದಿದ್ದು ಇದೀಗ ಆ ವಿಡಿಯೋ ಸೋಷಿಯ್ ಮೀಡಿಯಾದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!