- Advertisement -
- Advertisement -
ಲಾಕ್ ಡೌನ್ ಆದೇಶ ಉಲ್ಲಂಘಿಸಿದವರಿಗೆ ಬಸ್ಕಿ, ಕಸ ಗೂಡಿಸುವ ಶಿಕ್ಷೆ ನೀಡಿದ್ದ ಕಲಬುರಗಿ ಪೊಲೀಸರು ಶನಿವಾರ ರಸ್ತೆಯಲ್ಲೇ ಯೋಗ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ನಗರದ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನವಶ್ಯಕವಾಗಿ ರಸ್ತೆಗಿಳಿದವರನ್ನು ಹಿಡಿದು ಯೋಗದ ವಿವಿಧ ಆಸನಗಳನ್ನು ಮಾಡಿಸುವ ವಿನೂತನ ಶಿಕ್ಷೆ ನೀಡಿದರು.
ಅಲ್ಲದೇ, ರವಿವಾರ ರಾತ್ರಿ ಮನೆಯಲ್ಲಿ ದೀಪ ಹಚ್ಚುವ ಕುರಿತು ಪ್ರಧಾನಿ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಕೈಗೆ ಮೇಣದ ಬತ್ತಿ ಕೊಟ್ಟು, ಮನೆಯಲ್ಲಿ ದೀಪ ಬೆಳಗಿಸುವ ಪ್ರತಿಜ್ಞಾ ವಿಧಿಯನ್ನೂ ಪೊಲೀಸರು ಬೋಧಿಸಿದರು.
- Advertisement -