- Advertisement -
- Advertisement -
ಕಡಬ: ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಬೇಕಾಬಿಟ್ಟಿ ತಿರುಗುತ್ತಿದ್ದ ಖಾಸಗಿ ಕಾರುಗಳನ್ನು ವಶಪಡಿಸಿಕೊಂಡಿರುವ ಕಡಬ ಪೊಲೀಸರು ಅನಗತ್ಯ ತಿರುಗಾಡುವವರಿಗೆ ಶಾಕ್ ನೀಡಿದ್ದಾರೆ.
ಲಾಕ್ ಡೌನ್ ವೇಳೆಯಲ್ಲಿ ಖಾಸಗಿ ವಾಹನಗಳು ರಸ್ತೆಗಿಳಿಯಬಾರದು ಎಂಬ ಸೂಚನೆಯಿದ್ದರೂ, ಸಾರ್ವಜನಿಕರು ಕಾನೂನನ್ನು ಉಲ್ಲಂಘಿಸುತ್ತಿದ್ದರು. ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ಮತ್ತು ಕಡಬ ಠಾಣಾಧಿಕಾರಿಯವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಲವು ಖಾಸಗಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನದಿಂದ ಕಡಬ ಪರಿಸರದಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಹಲವೆಡೆ ನಾಕಾಬಂಧಿ ಹಾಕಲಾಗಿದೆ.
- Advertisement -