Sunday, April 28, 2024
Homeಕರಾವಳಿ'ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 40 ಸಾವಿರ ಮನೆಗಳಲ್ಲಿ ವಿಶ್ವ ಯೋಗದಿನ ಆಚರಣೆ'

‘ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 40 ಸಾವಿರ ಮನೆಗಳಲ್ಲಿ ವಿಶ್ವ ಯೋಗದಿನ ಆಚರಣೆ’

spot_img
- Advertisement -
- Advertisement -

ಬೆಳ್ತಂಗಡಿ: ಸಧೃಡ – ಸಶಕ್ತ – ಸ್ವಾಸ್ತ್ಯ ಜೀವನಕ್ಕಾಗಿ ಯೋಗ ಎಂಬ ಪರಿಕಲ್ಪನೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಜೂನ್ 21 ರಂದು ಬೆಳಗ್ಗೆ 7 ರಿಂದ 8 ಗಂಟೆ ತನಕ ತಮ್ಮ ಮನೆಯಲ್ಲಿಯೇ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವ ಮೂಲಕ ಈ ಬಾರಿ 6ನೇ ವಿಶ್ವ ಯೋಗ ದಿನ ಆಚರಣೆ ನಡೆಯಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದೇಶಾದ್ಯಂತ ಸುಮಾರು 40 ಸಾವಿರಕ್ಕೂ ಅಧಿಕ ಮನೆಗಳಲ್ಲಿ ವಿಶ್ವ ಯೋಗ ದಿನದಂದು ಯೋಗಾಭ್ಯಾಸ ನಡೆಯಲಿದೆ ಎಂದು ಉಜಿರೆ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ. ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ.

ಅವರು ಶನಿವಾರ ಉಜಿರೆ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. ಪ್ರಧಾನಮಂತ್ರಿ ಮೋದಿಯವರ ಆಶಯದಂತೆ ಧರ್ಮಾಧಿಕಾರಿ ಡಾ.ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕೇಂದ್ರ ಸರಕಾರದ ಆಯುಷ್ ಮಂತ್ರಾಲಯದ ನಿರ್ದೇಶನದಲ್ಲಿ ’ನನ್ನ ಜೀವನ-ಯೋಗ ಜೀವನ. ಮನೆಯೇ ಮೊದಲ ಯೋಗ ಚಾವಡಿ’ ಎಂಬ ವಿಭಿನ್ನ ಶೀರ್ಷಿಕೆಯಡಿ ವಿಶ್ವಯೋಗ ದಿನ ನಡೆಯಲಿದೆ. ಕಳೆದ ೫ ವರ್ಷಗಳಿಂದ ಬೇರೆಬೇರೆ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ-ಕಾಲೇಜಿನ ಮಕ್ಕಳನ್ನು ತರಬೇತುಗೊಳಿಸಿ ಒಂದೇ ವೇದಿಕೆಯಲ್ಲಿ ಯೋಗ ಪ್ರದರ್ಶಿಸಲ್ಪಡುತ್ತಿತ್ತು. ಈ ವರುಷ ಯೋಗವು ಮನೆ ಮನೆಗಳಲ್ಲಿ ಪ್ರಾರಂಭವಾಗಬೇಕು ಉದ್ದೇಶವಾಗಿದೆ ಎಂದರು.

6ನೇ ವಿಶ್ವ ಯೋಗ ದಿನ ಎಲ್ಲೆಲ್ಲಿ. ಹೇಗೆ ?
ಶ್ರೀಧ.ಮ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ದೇಶವ್ಯಾಪಿ ಪಸರಿಸಿರುವ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸುಮಾರು 1000 ಹೆಚ್ಚಿನ ಮನೆಗಳಲ್ಲಿ ಯೋಗ ದಿನಾಚರಣೆ ನಡೆಯಲಿದೆ.

ಧರ್ಮಸ್ಥಳದ ಶಾಂತಿವನ ಹಾಗೂ ಪರೀಕದ ಸೌಖ್ಯವನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ 20,000 ಕ್ಕೂ ಹೆಚ್ಚು ಸಾಧಕರು ಯೋಗಾಭ್ಯಾಸದ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಲು ಕ೦ಕಣಬದ್ಧರಾಗಿದ್ದಾರೆ. ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಸಂಸ್ಥೆಯಿಂದ 9 ಜಿಲ್ಲೆಗಳಲ್ಲಿ ೩ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಯೋಗ ತರಬೇತಿ ನೀಡಿದ್ದು, ಆ ವಿದ್ಯಾರ್ಥಿಗಳು ಮತ್ತು ತರಬೇತುದಾರರು ಅವರವರ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಿದ್ದಾರೆ.

ರಾಜ್ಯದ 10 ಜಿಲ್ಲೆಯ 10 ತಾಲೂಕುಗಳಲ್ಲಿ ಸರಕಾರ ಹಾಗು ಶಾಂತಿವನ ಟ್ರಸ್ಟ್‌ನಿಂದ ನಡೆಸಲ್ಪಡುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗಗಳಿದ್ದು, ಅಲ್ಲಿನ ವೈದ್ಯರು, ಸಾಧಕರು ಸೇರಿ ಸುಮಾರು 100 ಮನೆಗಳಲ್ಲಿ ಯೋಗಾಭ್ಯಾಸ ನಡೆಯಲಿದೆ ಎಂದರು.

ಆಚರಣಾ ಸಮಿತಿ ರಚಿಸಲಾಗಿದ್ದು ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಗೌರವಾಧ್ಯರಾಗಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಕಾರ್ಯಾಧ್ಯಕ್ಷರಾಗಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಉಪಾಧ್ಯಕ್ಷರಾಗಿ, ಶಾಂತಿವನ ಟ್ರಸ್ಟ್ ಕಾರ್ಯಾದರ್ಶಿ ಸೀತಾರಾಮ ತೋಳ್ಪಾಡಿತ್ತಾಯ ಸಂಘಟಣಾ ಕಾರ್ಯಾದರ್ಶಿಯಾಗಿ ಸಹಕಾರ ನೀಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀ.ಧ.ಮ ಯೋಗ ಮತ್ತು ನ್ಯೆತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ.ಐ.ಶಶಿಕಾಂತ ಜೈನ್, ಕಾಲೇಜಿನ ಡೀನ್‌ಗಳಾದ ಡಾ.ಸುಜಾತ, ಡಾ. ಗೀತ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!