Tuesday, June 16, 2026
Homeಕರಾವಳಿಮಂಗಳೂರುಸುಳ್ಯ; ಉದ್ಯಮಿ, ಕೃಷಿಕ, ರಾಜಾರಾಮ್ ಭಟ್ ಎಡಕ್ಕಾನ ವಿದೇಶದಲ್ಲಿ ವಿಧಿವಶ

ಸುಳ್ಯ; ಉದ್ಯಮಿ, ಕೃಷಿಕ, ರಾಜಾರಾಮ್ ಭಟ್ ಎಡಕ್ಕಾನ ವಿದೇಶದಲ್ಲಿ ವಿಧಿವಶ

- Advertisement -
- Advertisement -

ಸುಳ್ಯ; ಉದ್ಯಮಿ, ಕೃಷಿಕ, ರಾಜಾರಾಮ್ ಭಟ್ ಎಡಕ್ಕಾನ ವಿದೇಶದಲ್ಲಿ ವಿಧಿವಶರಾಗಿದ್ದಾರೆ. ಸುಳ್ಯ ತಾಲೂಕಿನ ಕಲ್ಮಡ್ಕದ ನಿವಾಸಿಯಾದ ಎಡಕ್ಕಾನ ರಾಜರಾಮ್ ಭಟ್ ಅವರು ಮಸ್ಕತ್‌ನಲ್ಲಿ ನಿದನರಾಗಿದ್ದಾರೆ. ಭಾರತೀಯ ಕಾಲಮಾನ ಮುಂಜಾನೆ 3 ಗಂಟೆಗೆ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಅವರ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ತಾಯಿ ಲಕ್ಷ್ಮೀ,  ಪತ್ನಿ, ಪುತ್ರ ಶ್ಯಾಮ, ಓರ್ವ ಪುತ್ರಿ ಹಾಗೂ ಸಹೋದರಿಯರನ್ನು ಅಗಲಿದ್ದಾರೆ. ದುಬೈನ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಅವರ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲಾಗುವುದು.

- Advertisement -

Latest News

error: Content is protected !!