Wednesday, June 24, 2026
Homeಕರಾವಳಿಮಂಗಳೂರುಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರು ಏನ್ ಹೇಳ್ತಾರೋ ಅದನ್ನ ಗೌರವದಿಂದ ಸ್ವೀಕರಿಸೋಣ; : ಮಂಗಳೂರು...

ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರು ಏನ್ ಹೇಳ್ತಾರೋ ಅದನ್ನ ಗೌರವದಿಂದ ಸ್ವೀಕರಿಸೋಣ; : ಮಂಗಳೂರು ಏರ್ಪೋರ್ಟ್ ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

- Advertisement -
- Advertisement -

ಮಂಗಳೂರು; ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರು ಏನ್ ಹೇಳ್ತಾರೋ ಅದನ್ನ ಗೌರವದಿಂದ ಸ್ವೀಕರಿಸೋಣ ಎಂದು ಮಂಗಳೂರು ಏರ್ಪೋರ್ಟ್ ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮುಂದಿನ ಐದು ವರ್ಷ ನನ್ನ ತಂದೆಯವರೇ ಸಿಎಂ ಆಗಿರುತ್ತಾರೆ, ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು  ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರು ಏನ್ ಮಾತು ಹೇಳ್ತಾರೋ ಅದನ್ನ ಗೌರವದಿಂದ ಸ್ವೀಕಾರ ಮಾಡೋಣ. ಅವರು ಹೈಕಮಾಂಡ್ ಹೇಳಿದ ಮೇಲೆ ನಾವು ಸ್ವೀಕಾರ ಮಾಡೋಣ. ಯತೀಂದ್ರ ಅವರನ್ನೇ ನಮ್ಮ ಹೈಕಮಾಂಡ್ ಅಂತ ಸ್ವೀಕಾರ ಮಾಡೋಣ. ನಾನು ಈ ಬಗ್ಗೆ ಯಾರಿಗೂ ಪ್ರತಿಕ್ರಿಯೆ ಕೊಡಲ್ಲ ಎಂದಿದ್ದಾರೆ. ಸದ್ಯ ಯತೀಂದ್ರ ಹಾಗೂ ಡಿಕೆಶಿ ಇಬ್ಬರ ಹೇಳಿಕೆಗಳು ರಾಜಕೀಯ ಪಡಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

- Advertisement -

Latest News

error: Content is protected !!