Friday, June 5, 2026
Homeತಾಜಾ ಸುದ್ದಿಮಾನ ಇಲ್ಲದ ಡಿ.ಕೆ. ಶಿವಕುಮಾರ್ ಗೆ ಮಾನ ನಷ್ಟವಾಗುತ್ತೆ: ಯತ್ನಾಳ್ ಮಾತಿನ ತಿರುಗೇಟು

ಮಾನ ಇಲ್ಲದ ಡಿ.ಕೆ. ಶಿವಕುಮಾರ್ ಗೆ ಮಾನ ನಷ್ಟವಾಗುತ್ತೆ: ಯತ್ನಾಳ್ ಮಾತಿನ ತಿರುಗೇಟು

- Advertisement -
- Advertisement -

ಬೆಂಗಳೂರು: ಯತ್ನಾಳ್ ಮೆಂಟಲ್ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆಗೂ ತಿರುಗೇಟು ನೀಡಿರುವ ಯತ್ನಾಳ್, ರೌಡಿ ಕೊತ್ವಾಲ್ ರಾಮಚಂದ್ರಗೆ ಚಹಾ, ಸಿಗರೇಟ್ ಕೊಡ್ತಿದ್ದ ರೌಡಿಗಳಿಂದ ನಾನೇನೂ ಕಲಿಯಬೇಕಿಲ್ಲ ಎಂದು ಹೇಳಿದ್ದಾರೆ.


ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಡಿ.ಕೆ.ಶಿವಕುಮಾರ್ ಮಾನನಷ್ಟ ಮೊಕದ್ದಮೆ ಹಾಕುವುದಾದರೆ ಹಾಕಲಿ.ಮಾನ ಇದ್ದವರಿಗೆ ಮಾನನಷ್ಟವಾಗುತ್ತೆ. ಮಾನ ಇಲ್ಲದವರಿಗೇನು ಮಾನ ನಷ್ಟವಾಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ 200 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಯತ್ನಾಳ್, ಮಾನ ಇಲ್ಲದವರಿಗೆ ಮಾನನಷ್ಟವೇನಾಗುತ್ತೆ ಎಂದು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!