- Advertisement -
![]()
- Advertisement -
ಬಂಟ್ವಾಳ; ಯಕ್ಷಗಾನ ಸಮಿತಿ ಮಾಣಿ ಇದರ 41ನೇ ವರ್ಷದ ತಾಳಮದ್ದಲೆ ಕೂಟ ದಿನಾಂಕ : 27-10-2024ನೇ ಆದಿತ್ಯವಾರ ಮಧ್ಯಾಹ್ನ ಗಂಟೆ 2.00ರಿಂದ ಕರ್ನಾಟಕ ಪ್ರೌಢಶಾಲೆ, ಮಾಣಿ (ಮಾಣಿ-ಉಪ್ಪಿನಂಗಡಿ ರಸ್ತೆ)ನಲ್ಲಿ ನಡೆಯಲಿದೆ.
ಕಾಸರಗೋಡು ಸುಬ್ರಾಯ ಪಂಡಿತ ಅವರ ರಾವಣ ವಧೆ ತಾಳ ಮದ್ದಲೆ ಪ್ರಸಂಗ ನಡೆಯಲಿದೆ.ಹಿಮ್ಮೇಳದಲ್ಲಿ : ಶ್ರೀ ರವಿಚಂದ್ರ ಕನ್ನಡಿಕಟ್ಟೆ ಶ್ರೀ ಜಗನ್ನಿವಾಸ ರಾವ್ ಪುತ್ತೂರು ಶ್ರೀ ಚೈತನ್ಯಕೃಷ್ಣ ಪದ್ಯಾಣ ಶ್ರೀ ದಿನೇಶ ನೀರ್‌ಕೆರೆ ಇರಲಿದ್ದಾರೆ.
ಇನ್ನು ಮುಮ್ಮೇಳದಲ್ಲಿ ರಾವಣನಾಗಿ ಶ್ರೀ ವಾಸುದೇವ ರಂಗ ಭಟ್ ಮಧೂರು, ಶ್ರೀರಾಮನಾಗಿ ಶ್ರೀ ಹಿರಣ್ಯ ವೆಂಕಟೇಶ್ವರ ಭಟ್, ಮಂಡೋದರಿಯಾಗಿ ಶ್ರೀ ಸಂಕದಗುಂಡಿ ಗಣಪತಿ ಭಟ್, ದೂತನಾಗಿ ಶ್ರೀ ಕೇಶವ ಭಟ್ ಕೇಕಣಾಜೆ, ಮಾತಲಿಯಾಗಿ ಶ್ರೀ ಗಣೇಶ್ ಭಟ್ ಕೇಕಣಾಜೆ ಇರಲಿದ್ದಾರೆ.
- Advertisement -


