Wednesday, June 3, 2026
Homeಕರಾವಳಿಯಕ್ಷಗಾನ ಕಲಾವಿದ, ಕಲಾಸೇವಕ ದಿನೇಶ್ ಶೆಟ್ಟಿ ವಿಕ್ರೋಲಿ ನಿಧನ

ಯಕ್ಷಗಾನ ಕಲಾವಿದ, ಕಲಾಸೇವಕ ದಿನೇಶ್ ಶೆಟ್ಟಿ ವಿಕ್ರೋಲಿ ನಿಧನ

- Advertisement -
- Advertisement -

ಮುಂಬಯಿ: ಯಕ್ಷಗಾನ ಕಲಾವಿದರಾದ ದಿನೇಶ್ ಶೆಟ್ಟಿ ವಿಕ್ರೋಲಿ ಇಂದು ನಿಧನರಾಗಿದ್ದಾರೆ.  ಇವರು ನಗರದ ಜನಪ್ರಿಯ ಯಕ್ಷಗಾನ ಗುರು, ಸಂಘಟಕ  ಬಾಲಕೃಷ್ಣ ಶೆಟ್ಟಿ ಅಜೆಕಾರು ಇವರ ಮುಂದಾಳತ್ವದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಹಾಗೂ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ ಅಸಲ್ಪ ಘಾಟ್ಕೋಪರ್ ಕಲಾ ಸಂಸ್ಥೆಗಳಲ್ಲಿ ಕಲಾಸೇವೆ ಮಾಡುತ್ತಿದ್ರು.  

ಈ ಕಲಾ ಸಂಸ್ಥೆಗಳ ಮೂಲಕ ಜರಗುತ್ತಿದ್ದ ಎಲ್ಲಾ ಯಕ್ಷಗಾನ ಪ್ರದರ್ಶನಗಳಿಗೆ ಹಿನ್ನಲೆ ಸಹಕಾರವನ್ನು ನೀಡುತ್ತಿದ್ರು. ಮತ್ತು ಸಮಯ ಸಂದರ್ಭಕ್ಕನುಗಣವಾಗಿ ಸಣ್ಣ , ಪುಟ್ಟ ವೇಷವನ್ನು ಮಾಡಿ ಈ‌ ಮೂಲಕ ಯಕ್ಷಗಾನ ಕಲಾಸೇವಾ ನಿರತರಾಗಿದ್ರು.  

- Advertisement -

Latest News

error: Content is protected !!