Monday, June 8, 2026
Homeಕರಾವಳಿಕಡಬ; ಪತ್ನಿ ಹಾಗೂ ಮಗು ತನ್ನಿಂದ ದೂರವಾದ ಚಿಂತೆ; ವ್ಯಕ್ತಿ ಆತ್ಮಹತ್ಯೆಗೆ ಶರಣು

ಕಡಬ; ಪತ್ನಿ ಹಾಗೂ ಮಗು ತನ್ನಿಂದ ದೂರವಾದ ಚಿಂತೆ; ವ್ಯಕ್ತಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಕಡಬ: ಪತ್ನಿ ಮತ್ತು ಮಗು ತನ್ನಿಂದ ದೂರವಾಗಿದ್ದಾರೆ ಎಂಬ ಚಿಂತೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಟ್ರುಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಕಡಬ ತಾಲೂಕಿನ ಕುಟ್ರುಪ್ಪಾಡಿ  ಗ್ರಾಮದ ಎಲ್ಯ ನಿವಾಸಿ ಬೆನ್ನಿ ವಿ ಸಿ (42) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಇವರ ಪತ್ನಿ ಕಳೆದ ಆರು ವರ್ಷಗಳಿಂದ  ದೂರವಾಗಿ ಮಗುವಿನೊಂದಿಗೆ ತವರು ಮನೆಯಲ್ಲಿ ವಾಸವಿದ್ದಾರೆ.  ಹೀಗಾಗಿ ತಾಯಿ ಮತ್ತು ಮಗ ಮಾತ್ರ ಮನೆಯಲ್ಲಿ ವಾಸವಿದ್ದರು.  ತಾಯಿ ತನ್ನ ಹಿರಿಯ  ಮಗಳ ಮನೆಗೆ ತೆರಳಿದ್ದ ಸಂದರ್ಭ ಬೆನ್ನಿಯವರು ಮನೆಯೊಳಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!