Wednesday, June 24, 2026
Homeಕರಾವಳಿಉಡುಪಿಉಡುಪಿ : ನಿರ್ಮಾಣ ಹಂತದಲ್ಲಿದ್ದ ಮನೆಯ ಮರದ ದಾರಂದ ಮೈಮೇಲೆ ಬಿದ್ದು ಕಾರ್ಮಿಕ ಸಾವು

ಉಡುಪಿ : ನಿರ್ಮಾಣ ಹಂತದಲ್ಲಿದ್ದ ಮನೆಯ ಮರದ ದಾರಂದ ಮೈಮೇಲೆ ಬಿದ್ದು ಕಾರ್ಮಿಕ ಸಾವು

- Advertisement -
- Advertisement -

ಉಡುಪಿ : ನಿರ್ಮಾಣ ಹಂತದಲ್ಲಿದ್ದ ಮನೆಯ ಮರದ ದಾರಂದ ಮೈಮೇಲೆ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕೊರಂಗ್ರಪಾಡಿ ಗ್ರಾಮದ ನಂದಗೋಕುಲ ಎಂಬಲ್ಲಿ ನಡೆದಿದೆ. ಬಸಪ್ಪ ಮಾದರ(38) ಮೃತ ದುರ್ದೈವಿ.

ಇವರು ನಂದಗೋಕುಲದ ರಾಘವೇಂದ್ರ ತಂತ್ರಿ ಎಂಬವರ ಹೊಸಮನೆ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮೇಸ್ತ್ರಿ ಜೊತೆ ಮನೆಯ ಮುಖ್ಯದ್ವಾರದ ಮರದ ದಾರಂದವನ್ನು ನಿಲ್ಲಿಸಿದ್ದರು. ಬಳಿಕ ಊಟ ಮಾಡಿ ಬಂದ ಬಸಪ್ಪ ದಾರಂದ ನಿಲ್ಲಿಸಿದ ಸೀಟ್‌ಔಟ್‌ನಲ್ಲಿ ಮಲಗಿದ್ದರು. ಈ ವೇಳೆ ದಾರಂದ ಆಕಸ್ಮಿಕ ವಾಗಿ ಬಸಪ್ಪ ಮಾದರ ಅವರ ತಲೆಯ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!