- Advertisement -
![]()
- Advertisement -
ಬೆಂಗಳೂರು: ದೊಡ್ಡ ಕರುಳಿನ ಕ್ಯಾನ್ಸರ್ ಗೆ ರಾಜ್ಯದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಬೆಸ್ಕಾಂ ಜಾಗೃತ ದಳದ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಲಾವಣ್ಯ ನಾರಾಯಣಪ್ಪ ಇಂದು ಬೆಂಗಳೂರಿನ ಹೆಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇಂಜಿನಿಯರಿಂಗ್ ಪದವೀಧರೆಯಾಗಿದ್ದ 39 ವರ್ಷದ ಲಾವಣ್ಯ ಕೆಎಸ್ ಪಿಎಸ್ ಅಧಿಕಾರಿಯಾಗಿ ಪೊಲೀಸ್ ಸೇವೆಗೆ ಸೇರಿದ್ದು ಬಳಿಕ ಐಪಿಎಸ್ ಗೆ ಪದೋನ್ನತಿ ಪಡೆದಿದ್ದರು.
ಮೃತ ಲಾವಣ್ಯ ಮೂಲತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನವರಾಗಿದ್ದು, ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿಯಾಗಿದ್ದರು.
- Advertisement -


