Wednesday, June 24, 2026
Homeಕರಾವಳಿಸುಳ್ಯ :ಕೆರೆಗೆ ಬಿದ್ದು ವಿವಾಹಿತೆ ಸಾವು

ಸುಳ್ಯ :ಕೆರೆಗೆ ಬಿದ್ದು ವಿವಾಹಿತೆ ಸಾವು

- Advertisement -
- Advertisement -

ಸುಳ್ಯ : ಕೆರೆಗೆ ಬಿದ್ದು ವಿವಾಹಿತೆ ಸಾವನ್ನಪ್ಪಿರುವ ಘಟನೆ ಆಲೆಟ್ಟಿ ಗ್ರಾಮದ ಕೋಲ್ಚಾರಿನ ಕುಡೆಂಬಿಯಲ್ಲಿ ಶುಕ್ರವಾರ ನಡೆದಿದೆ.ಗಿರೀಶ್ ಪಡ್ಡಂಬೈಲು ಎಂಬವರ ಪತ್ನಿ ತೀರ್ಥಕುಮಾರಿ ( 31) ಮೃತ ಮಹಿಳೆ.

ಅವರನ್ನು ಕಳೆದ ಒಂದು ವಾರದ ಹಿಂದೆ ಪುತ್ತೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು.ಗುರುವಾರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬರಲಾಗಿತ್ತು. ತೀರ್ಥಕುಮಾರಿ ಗುರುವಾರ ರಾತ್ರಿ ವೇಳೆ ಮನೆಯವರು ಮಲಗಿದ್ದ ಸಂದರ್ಭ ಎದ್ದು ಹೋಗಿದ್ದು ಬೆಳಗ್ಗೆ ನೋಡಿದಾಗ ನಾಪತ್ತೆಯಾಗಿದ್ದರು. ಮನೆಯವರು ಹುಡುಕಾಟ ನಡೆಸಿದಾಗ ಪಕ್ಕದ ಮನೆಯ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಇವರು ಕಳೆದ ಹಲವು ಸಮಯಗಳಿಂದ ಮಾನಸಿಕವಾಗಿ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತರು ಪತಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!