Saturday, June 6, 2026
Homeಕರಾವಳಿಕಾಣಿಯೂರು: ಬೈಕ್ ಗಳ ಮಧ್ಯೆ ಅಪಘಾತ; ಡೈರಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ಮಹಿಳೆ ಸಾವು

ಕಾಣಿಯೂರು: ಬೈಕ್ ಗಳ ಮಧ್ಯೆ ಅಪಘಾತ; ಡೈರಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ಮಹಿಳೆ ಸಾವು

- Advertisement -
- Advertisement -

ಕಾಣಿಯೂರು: ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿ ಡೈರಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಕಾಣಿಯೂರು ಸಮೀಪದ ಬರೆಪ್ಪಾಡಿ ನಡೆದಿದೆ. ಬರೆಪ್ಪಾಡಿ ನಿವಾಸಿ ನಾರಾಯಣ ಭಟ್ ಎಂಬವರ ಪತ್ನಿ ವೈಶಾಲಿ(40) ಮೃತ ಮಹಿಳೆ.

ವೈಶಾಲಿ ಅವರು ತನ್ನ ಮನೆಯಿಂದ ಹಾಲಿನ ಡೈರಿಗೆಂದು ಹಾಲು ತೆಗೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕುಗಳೆರಡು ಅಪಘಾತವಾಗಿದೆ.ಒಂದು ಬೈಕ್ ರಸ್ತೆಯಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿಯಾಗಿದೆ ಎನ್ನಲಾಗಿದೆ.ಅಪಘಾತದ ರಭಸಕ್ಕೆ ಪಾದಾಚಾರಿ ಮಹಿಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಮೃತ ಮಹಿಳೆಯ ಪತಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!