Monday, June 8, 2026
Homeತಾಜಾ ಸುದ್ದಿಶಾಸಕರ ಭವನದಲ್ಲಿ ಶಾಸಕರ ಕೊಠಡಿಯಲ್ಲಿ ನ್ಯಾಯ ಕೊಡಿಸುವಂತೆ ಮಹಿಳಾ ಅಧಿಕಾರಿ ಗಲಾಟೆ

ಶಾಸಕರ ಭವನದಲ್ಲಿ ಶಾಸಕರ ಕೊಠಡಿಯಲ್ಲಿ ನ್ಯಾಯ ಕೊಡಿಸುವಂತೆ ಮಹಿಳಾ ಅಧಿಕಾರಿ ಗಲಾಟೆ

- Advertisement -
- Advertisement -

ಬೆಂಗಳೂರು: ಬಿಜೆಪಿ ಶಾಸಕರೊಬ್ಬರ ಕೊಠಡಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಮಾತಿನ ಚಕಮಕಿ ನಡೆಸಿದ್ದಾರೆ. ಬೆಂಗಳೂರಿನ ಶಾಸಕರ ಭವನದಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ಅವರ ಕೊಠಡಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಮಾತಿನ ಚಕಮಕಿ ನಡೆಸಿದ್ದಾರೆ.

ಶಾಸಕರ ಭವನದಲ್ಲಿರುವ ಶಾಸಕರ ಕೊಠಡಿಗೆ ದಿಢೀರ್ ಎಂಟ್ರಿ ಕೊಟ್ಟ ಮಹಿಳೆ, ಬಸವರಾಜ ದಡೇಸೂಗೂರು ಅನ್ಯಾಯ ಮಾಡಿದ್ದಾರೆ ಅಂತ ಗದ್ದಲ ಎಬ್ಬಿಸಿದ್ದಾರೆ.

ತನಗೆ ನ್ಯಾಯ ಕೊಡಿಸುವಂತೆ ಮಹಿಳಾ ಅಧಿಕಾರಿ ಗದ್ದಲ ನಡೆಸಿದ ಕಾರಣ ಶಾಸಕರ ಭವನದ ಭದ್ರತಾ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ಶಾಸಕರ ಭವನದಿಂದ ಹೊರಗೆ ಕಳುಹಿಸಿದ್ದಾರೆ.

ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಶಾಸಕ ದಡೇಸೂಗೂರು ತಮ್ಮ ಕೊಠಡಿಗೆ ಬೀಗ ಹಾಕಿಕೊಂಡು ಶಾಸಕರ ಭವನದಿಂದ ಹೊರಟು ಹೋಗಿದ್ದಾರೆ. ನಿನ್ನೆ ಘಟನೆ ‌ನಡೆದ ಹಿನ್ನೆಲೆಯಲ್ಲಿ ಶಾಸಕ ಭವನದ ಬಸವರಾಜ ದಡೇಸೂಗೂರು ಕೊಠಡಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

- Advertisement -

Latest News

error: Content is protected !!