Thursday, June 4, 2026
Homeಕರಾವಳಿಉಡುಪಿಕುಂದಾಪುರ: ನೀರು ತುಂಬಿದ ಗದ್ದೆಗೆ ಆಯ ತಪ್ಪಿ ಬಿದ್ದು ಮಹಿಳೆ ಸಾವು

ಕುಂದಾಪುರ: ನೀರು ತುಂಬಿದ ಗದ್ದೆಗೆ ಆಯ ತಪ್ಪಿ ಬಿದ್ದು ಮಹಿಳೆ ಸಾವು

- Advertisement -
- Advertisement -

ಕುಂದಾಪುರ:  ಗದ್ದೆಯ ನೀರು ತೆರವು ಮಾಡಲು ಹೋದ ಮಹಿಳೆ ನೀರು ತುಂಬಿಕೊಂಡಿದ್ದ ಗದ್ದೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹಲ್ತೂರಿನಲ್ಲಿ ನಡೆದಿದೆ.

ಹಲ್ತೂರಿನ ಕೆಳಬೆಟ್ಟು ನಿವಾಸಿ ಶೀನ ಪೂಜಾರಿ ಎಂಬವರ ಪತ್ನಿ ಲಕ್ಷ್ಮೀ ಪೂಜಾರ್ತಿ (66) ಎಂಬವರು ಮೃತಪಟ್ಟ ಮಹಿಳೆಯಾಗಿದ್ದಾರೆ. ಗದ್ದೆಯಲ್ಲಿ ತುಂಬಿದ್ದ ಮಳೆ ನೀರು ಹರಿಯಲು ಅವಕಾಶ ಮಾಡಿಕೊಡಲು ಹಲ್ತೂರು ಬೈಲಿನ ತಮ್ಮ ಕೃಷಿ ಗದ್ದೆಗಳಿಗೆ ಗಂಡ ಮತ್ತು ಹೆಂಡತಿ ಇಬ್ಬರೂ ತೆರಳಿದ್ದರು.

ಈ ವೇಳೆ ಆಯ ತಪ್ಪಿದ ಲಕ್ಷ್ಮೀ ಪೂಜಾರ್ತಿ ಗದ್ದೆಗೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಗ್ರಾಮ ಲೆಕ್ಕಿಗರಾದ ದೀಪಿಕಾ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!