Saturday, April 20, 2024
HomeUncategorizedಮುಂಬೈ:ಕ್ರೇನ್‌ ಯಂತ್ರ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿದ ಮಹಿಳೆ- ಇಬ್ಬರ ಸ್ಥಿತಿ ಗಂಭೀರ!..

ಮುಂಬೈ:ಕ್ರೇನ್‌ ಯಂತ್ರ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿದ ಮಹಿಳೆ- ಇಬ್ಬರ ಸ್ಥಿತಿ ಗಂಭೀರ!..

spot_img
- Advertisement -
- Advertisement -

ಮುಂಬೈ: ಇಲ್ಲಿನ ಅಂಧೇರಿ ಉಪನಗರದಲ್ಲಿ ವೆಸ್ಟರ್ನ್‌ ಎಕ್ಸ್‌ಪ್ರೆಸ್‌ ಹೈವೆ ಸಮೀಪ ಕ್ರೇನ್‌ ಯಂತ್ರ ಮೆಟ್ರೊ ರೈಲಿನ ಕಂಬಕ್ಕೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ರೇನ್‌ನ ಒಂದು ಭಾಗ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಬಸ್‌ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದ್ದು ಬಾಂದ್ರದಿಂದ ಜೋಗೇಶ್ವರಿ ಕಡೆಗೆ ಚಲಿಸುತ್ತಿದ್ದ ಕ್ರೇನ್‌, ಚಾಲಕನ ನಿಯಂತ್ರಣ ತಪ್ಪಿ ಮೆಟ್ರೊ ರೈಲಿನ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಈ ವೇಳೆ ಬಸ್‌ಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದ ಮಹಿಳೆಯ ಮೇಲೆ ಕ್ರೇನ್‌ನ ಭಾಗವೊಂದು ಬಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಕ್ರೇನ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!