Saturday, June 29, 2024
Homeಉದ್ಯಮಕೆಲಸ ಕೊಡದೆ 20 ವರ್ಷ ಸಂಬಳ ಕೊಟ್ಟ ಕಂಪೆನಿ ವಿರುದ್ಧ ಮಹಿಳೆ ದೂರು!; ವಿಚಿತ್ರ ಘಟನೆ

ಕೆಲಸ ಕೊಡದೆ 20 ವರ್ಷ ಸಂಬಳ ಕೊಟ್ಟ ಕಂಪೆನಿ ವಿರುದ್ಧ ಮಹಿಳೆ ದೂರು!; ವಿಚಿತ್ರ ಘಟನೆ

spot_img
- Advertisement -
- Advertisement -

ಪ್ಯಾರಿಸ್ ನಲ್ಲಿ ಮಹಿಳೆಯೊಬ್ಬರು ಯಾವುದೇ ಕೆಲಸ ಕೊಡದೆ 20 ವರ್ಷಗಳ ಕಾಲ ತನಗೆ ಸಂಬಳ ನೀಡಿದ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಿದ ವಿಚಿತ್ರ ಘಟನೆ ನಡೆದಿದೆ.

ಲಾರೆನ್ಸ್‌ ವ್ಯಾನ್‌ ವಾಸ್ಸೆನ್‌ಹೋವ್‌ ಎಂಬ ಹೆಸರಿನ ಮಹಿಳೆ ಆರೇಂಜ್‌ ಟೆಲಿಕಾಂ ಸಂಸ್ಥೆಯಲ್ಲಿ 1993ರಲ್ಲಿ ಕೆಲಸಕ್ಕೆ ಸೇರಿದ್ದರು. ಪಾರ್ಶ್ವವಾಯು, ಮೂರ್ಛೆ ರೋಗದಿಂದ ಬಳಲುತ್ತಿದ್ದ ಲಾರೆನ್ಸ್‌ 2002ರಲ್ಲಿ ವರ್ಗಾವಣೆಗೆ ಕೋರಿದ್ದರು. ಕಂಪೆನಿ ವರ್ಗಾವಣೆ ಮಾಡಿದ್ದರೂ, ಅವರಿಗೆ ಯಾವುದೇ ನಿರ್ದಿಷ್ಟ ಕೆಲಸ ನೀಡಿರಲಿಲ್ಲ. 2 ದಶಕ ಕೆಲಸ ಮಾಡದಿದ್ದರೂ ನಿರಂತರವಾಗಿ ಅವರಿಗೆ ಕಂಪೆನಿ ವೇತನ ನೀಡಿದೆ. ಈ ಪರಿಸ್ಥಿತಿಯಿಂದ ನಾನು ಒಂಟಿತನ ಹಾಗೂ ನೈತಿಕ ಶೋಷಣೆ ಅನುಭವಿಸಿದ್ದೇನೆ. ನನ್ನ ವೃತ್ತಿ ಬದುಕಿಗೆ ಧಕ್ಕೆಯಾಗಿದೆ ಎಂದು ಲಾರೆನ್ಸ್‌ ಕಂಪೆನಿ ವಿರುದ್ಧ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಆರೇಂಜ್‌ ಕಂಪೆನಿ, ಲಾರೆನ್ಸ್‌ ಅವರ ವೈದ್ಯಕೀಯ ಸ್ಥಿತಿ ಪರಿಗಣಿಸಿ, ಅನುಕೂಲ ವಾತಾವರಣದಲ್ಲಿ ಕೆಲಸ ಮಾಡಲು ತಿಳಿಸಿದ್ದೆವು. ಅವರ ನಿರಂತರ ಅನಾರೋಗ್ಯ ರಜೆಯಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ತಿಳಿಸಿದೆ.

- Advertisement -
spot_img

Latest News

error: Content is protected !!