Saturday, June 6, 2026
Homeಕರಾವಳಿಬಂಟ್ವಾಳದಲ್ಲಿ ವಕೀಲರ ಸಂಘ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ವಿಶ್ವ ಭೂ ದಿನಾಚರಣೆ

ಬಂಟ್ವಾಳದಲ್ಲಿ ವಕೀಲರ ಸಂಘ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ವಿಶ್ವ ಭೂ ದಿನಾಚರಣೆ

- Advertisement -
- Advertisement -

ಬಂಟ್ವಾಳದಲ್ಲಿ ವಕೀಲರ ಸಂಘ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಜಂಟಿ ಆಶ್ರಯದಲ್ಲಿ ವಿಶ್ವ ಭೂ ದಿನಾಚರಣೆನ್ನು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳದ ಕಾರ್ಯದರ್ಶಿ ಚಂದ್ರಶೇಖರ ತಳವಾರ ಅವರು ಸಸಿಗೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಶಿವಪ್ರಕಾಶ್ ಜೈನ್ ಅವರು ಪ್ರಕೃತಿಯ ರಕ್ಷಣೆಗೆ ನಾವು ಯಾವ ಮುಂಜಾಗ್ರತೆ ಮಾಡಬೇಕು ಮತ್ತು ಪಕೃತಿಯ ರಕ್ಷಣೆಗೆ ನಮ್ಮ ಕರ್ತವ್ಯವೇನು ಎಂಬ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸರಕಾರಿ ಅಭಿಯೋಜಕರು ಹರಿಣಿ ಅವರು ಉಪಸ್ಥಿತರಿದ್ದರು ವಕೀಲರ ಸಂಘದ ಅಧ್ಯಕ್ಷರಾದ ರಿಚರ್ಡ್ ಕೋಸ್ತ ಎಂ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಕೀಲರ ಸಂಘದ ಹಿರಿಯ ಕಿರಿಯ ವಕೀಲ ಮಿತ್ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!