Friday, June 5, 2026
Homeಕರಾವಳಿಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆರೋಪಕ್ಕೆ ಅರುಣ್ ಕುಮಾರ್ ಪುತ್ತಿಲ ಹೇಳಿದ್ದೇನು?

ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆರೋಪಕ್ಕೆ ಅರುಣ್ ಕುಮಾರ್ ಪುತ್ತಿಲ ಹೇಳಿದ್ದೇನು?

- Advertisement -
- Advertisement -

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಹಿಂದುತ್ವ ವಿರೋಧಿ ಎಂಬ ಹೇಳಿಕೆಗೆ ಪುತ್ತಿಲ ಅವರು ಇದೀಗ ಪ್ರತಿಕ್ರಿಯಿಸಿದ್ದಾರೆ.ಕಲ್ಲಡ್ಕ ಪ್ರಭಾಕರ್ ಭಟ್ ಹತಾಶರಾಗಿ ಆ ರೀತಿ ಆರೋಪ ಮಾಡಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅರುಣ್ ಕುಮಾರ್ ಪುತ್ತಿಲ, ನಾನು ಸ್ಪರ್ಧೆ ಮಾಡುವ ಮೊದಲು ಸಂಘ ಪರಿವಾರದ ಹಿರಿಯ ಆಶೀರ್ವಾದ ಪಡೆದಿದ್ದೇನೆ. ಬಿಜೆಪಿಯ ಪ್ರಮುಖರು ಸ್ವಾಮಿಜಿಗಳ ಜೊತೆ ಚರ್ಚೆ ಮಾಡಿಯೇ ಸ್ಪರ್ಧಿಸಿದ್ದೇನೆ. ಪ್ರಭಾಕರ್ ಭಟ್ ಹಿರಿಯರು ಅವರ ಮೇಲೆ ನಮಗೆ ಅಪಾರವಾದ ಗೌರವವಿದೆ. ಇವತ್ತು ಕ್ಷೇತ್ರದಲ್ಲಿನ ಚುನಾವಣಾ ಆಗುಹೋಗುಗಳನ್ನು ನೋಡಿ ಹತಾಶ ಮನೋಭಾವದಿಂದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಮಾತು ಕಾರ್ಯಕರ್ತರ ಮನಸ್ಸಿಗೆ ನೋವುಂಟು ಮಾಡಿದೆ. ಎಲ್ಲದಕ್ಕೂ ಉತ್ತರ ಮೇ 13ಕ್ಕೆ ಮತದಾರ ಕೊಡಲಿದ್ದಾನೆ. ಹಿಂದುತ್ವಕ್ಕೆ ಈ ಬಾರಿ ಚುನಾವಣೆಯಲ್ಲಿ ಗೆಲವು ಖಂಡಿತ. ನನ್ನ ಸ್ಪರ್ಧೆ ಇರುವುದು ಕಾಂಗ್ರೇಸ್ ವಿರುದ್ದ, ಹಿಂದುತ್ವದ ಮೇಲೆ ಈ ಕ್ಷೇತ್ರ ಈವರೆಗೆ ಗೆದ್ದಿದೆ. ಈ ಬಾರಿಯೂ ಗೆಲವು ಸಿಗುತ್ತದೆ ಎಂದಿದ್ದಾರೆ.

- Advertisement -

Latest News

error: Content is protected !!